ಪಾಳು ಬಾವಿಗೆ ಬಿದ್ದು ಹುಲಿ ಸಾವು: ಶ್ರೀಮಂಗಲದಲ್ಲಿ ಘಟನೆ

04/12/2020

ಮಡಿಕೇರಿ ಡಿ.4 : ಪಾಳು ಬಾವಿಗೆ ಬಿದ್ದು ಹುಲಿಯೊಂದು ಸಾವಿಗೀಡಾಗಿರುವ ಘಟನೆ ಶ್ರೀಮಂಗಲದಲ್ಲಿ ನಡೆದಿದೆ.

ಶ್ರೀಮಂಗಲ ಗ್ರಾಮದ ಶ್ರೀಮಂಗಲ-ಕುಟ್ಟ-ಮಾನಂದವಾಡಿ ಅಂತರರಾಜ್ಯ ಹೆದ್ದಾರಿ ಬದಿಯ ಕೂರ್ಗ್ ಗೆಸ್ಟ್ ಹೌಸ್ ಬಳಿಯ ಗಣೇಶ್ ಅವರ ಜಾಗದಲ್ಲಿರುವ ಪಾಳು ಬಾವಿಯಲ್ಲಿ ಶುಕ್ರವಾರ ಹುಲಿಯ ಕಳೇಬರ ಪತ್ತೆಯಾಗಿದ್ದು, ಹುಲಿಯು ಸತ್ತು ಒಂದು ವಾರವಾಗಿರಬಹುದೆಂದು ಹೇಳಲಾಗಿದೆ.

ಸುಮಾರು 15 ಅಡಿ ಆಳವಿರುವ ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ಇರುವ ಬಾವಿಗೆ ಹುಲಿ ಬಿದ್ದಿದೆ. ಶುಕ್ರವಾರ ಕೊಳೆತ ವಾಸನೆ ಬರುತಿದ್ದ ಹಿನ್ನೆಲೆಯಲ್ಲಿ ಸುತ್ತ ಮುತ್ತ ನಿವಾಸಿಗಳು ಪರಿಶೀಲಿಸಿದಾಗ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ನಂತರವμÉ್ಟೀ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಸ್ಥಳಕ್ಕೆ ತಿತಿಮತಿ ಎ.ಸಿ.ಎಫ್ ಉತ್ತಪ್ಪ, ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ, ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸಣ್ಣವರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.