ಕುಶಾಲನಗರದಲ್ಲಿ “ಸುಸ್ಥಿರ ಆರೋಗ್ಯಕ್ಕೆ ಯೋಗಾಸನ ” ವಿಷಯದ ಕುರಿತು ಕಾರ್ಯಾಗಾರ

04/12/2020

ಕುಶಾಲನಗರ ಡಿ. 4 : ಭಾರತ ದೇಶದಲ್ಲಿ ಜನ್ಮ ತಾಳಿದ ಯೋಗಾಸನ ಪ್ರಸಕ್ತ ಅಂತರಾಷ್ಟ್ರೀಯ ಮಟ್ಟದವರೆಗೂ ಹರಡಿಕೊಂಡಿದೆ. ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ಒತ್ತಡದ ನಡುವೆ ಜೀವಿಸುತ್ತಿರುವ ನಮ್ಮ ದೈನಂದಿನ ಜೀವನಕ್ಕೆ ಯೋಗಾಸನವು ಅಗತ್ಯವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ, ಇಲ್ಲಿನ ವಿಜ್ಞಾನ ಸಂಕೀರ್ಣದಲ್ಲಿ ಪಿ.ಜಿ. ಡಿಪೆÇ್ಲೀಮ ಯೋಗ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸುಸ್ಥಿರ ಆರೋಗ್ಯಕ್ಕೆ ಯೋಗಾಸನ ” ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಯುವಜನತೆಯಲ್ಲಿ ಉತ್ಸಾಹ, ಹುರುಪು, ಹುಮ್ಮಸ್ಸು ಮರೆಯಾಗುತ್ತಿದ್ದು, ನಾಲಿಗೆಯ ರುಚಿಗೆ ಪೂರಕವಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಧಾರ್ಮಿಕ ಅನುಸರಣೆ ಮಾಡುವವರು ಒಂದು ಸಮಾಜದ ಆಸ್ತಿಯಾಗಿರುತ್ತಾರೆ. ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚು ಪ್ರಾಮುಖ್ಯತೆ ಮತ್ತು ಮಹತ್ವವನ್ನು ಪಡೆದುಕೊಂಡಿದ್ದು ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಾರಗಳು ಅತ್ಯವಶ್ಯಕವಾಗಿವೆ. ಪ್ರತಿನಿತ್ಯ ಯೋಗಾಸನ ಮಾಡುವ ಮೂಲಕ ಒತ್ತಡದ ಕೆಲಸಗಳಿದ್ದರೂ ಏಕಾಗ್ರತೆಯಿಂದ ಉತ್ತಮವಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಆದ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಬಹು ಮುಖ್ಯವಾಗಿದ್ದು ಮಾನಸಿಕ ಮತ್ತು ದೈಹಿಕ ಸಧೃಡತೆಗೆ ಯೋಗ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂದಿನ ಯುವಜನತೆಯ ಆಹಾರ ಕ್ರಮ ಸರಿಯಿಲ್ಲ. ನೈಸರ್ಗಿಕ ಆಹಾರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಪ್ರತಿಯೊಬ್ಬರು ದಿನದ ಸ್ವಲ್ಪ ಸಮಯವನ್ನು ಏಕಾಗ್ರತೆ, ಆಧ್ಯಾತ್ಮಿಕತೆ, ದೈಹಿಕ ಮತ್ತು ಮಾನಸಿಕ ಆತ್ಮಸ್ಥೈರ್ಯವನ್ನು ಹೊಂದಲು ಮೀಸಲಿಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತರಬೇತಿ ಮತ್ತು ನಿಯೋಜನೆಯ ಸಲಹೆಗಾರರಾದ ಡಾ. ಗುರುರಾಜ್, ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರಾದ ಪೆÇ್ರ. ಕೆ.ಎಸ್. ಚಂದ್ರಶೇಖರಯ್ಯ, ಯೋಗ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ.ಜೆ.ಶಾಮಾ ಸುಂದರ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ರಾಯಲ್ ಹೆಲ್ತ್ ಕೇರ್ ಆಂಡ್ ವೆಲ್ನೆಸ್ ಸೆಂಟರ್ ಆಫ್ ಎಕ್ಸಲೆನ್ಸ್‍ನ ರೂಪ ಚಂದ್ರಶೇಖರ್ ಮತ್ತು ಕಾರ್ಯನಿರ್ವಾಣಾಧಿಕಾರಿಗಳಾದ ಅಂಜು ಥಾಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ.ಐ.ಕೆ. ಮಂಜುಳಾ, ಜೀವರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಚಂದ್ರಶೇಖರ್.ಜಿ ಜೋಶಿ, ಡಾ. ಕೆ.ಕೆ.ಧರ್ಮಪ್ಪ, ಡಾ. ಸ್ನೇಹರಾಣಿ, ರಾಜ್‍ಕುಮಾರ್ ಎಸ್. ಮೇಟಿ, ಜೀವರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಿ.ಎಸ್. ಶ್ರೀನಾಥ್, ಮಂಗಳೂರು ವಿಶ್ವವಿದ್ಯಾನಿಲಯದ ಸಂಪರ್ಕ ಅಧಿಕಾರಿ ಮೈನಾ, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಮತ್ತು ತಾಂತ್ರಿಕ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.