ಹಾಕತ್ತೂರಿನಲ್ಲಿ ಡಿ.12,13 ರಂದು ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ

04/12/2020

ಮಡಿಕೇರಿ ಡಿ.4 : ಅಟೇಕರ್ಸ್ ಹಾಕತ್ತೂರು ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ 6+2ಜನರ ಕಾಲ್ಚೆಂಡು ಪಂದ್ಯಾಟ ಡಿಸೆಂಬರ್ 12,ಮತ್ತು 13 ರಂದು ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ನೋಂದಾಯಿಸಿದ 30 ತಂಡಗಳಿಗೆ ಮಾತ್ರ ಪಂದ್ಯಾವಳಿ ಭಾಗವಹಿಸಲು ಅವಕಾಶವಿರುವುದು.
ಆಸಕ್ತ ತಂಡಗಳು ಡಿಸೆಂಬರ್ 06ರೊಳಗೆ ನೋಂದಾಯಿಸಲು ಆಯೋಜಕರು ಮನವಿ ಮಾಡಿದ್ದಾರೆ.
ಕೋವಿಡ್-19 ಮಾರ್ಗಸೂಚಿಯಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9481770673,8310148352, ಹಾಗೂ 9481129964 ಮೊಬೈಲ್ ಸಂಖ್ಯೆಯನ್ನ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.