ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾಗಿ ರವಿಕುಶಾಲಪ್ಪ ನೇಮಕ

04/12/2020

ಮಡಿಕೇರಿ ಡಿ.4 :    ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷರಾಗಿ  ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಮುಕ್ಕೋಡ್ಲುವಿನ ಶಾಂತೆಯಂಡ ರವಿಕುಶಾಲಪ್ಪರವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಿ ಕರ್ನಾಟಕ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 80 ರ ದಶಕದಿಂದಲೂ ಭಾ.ಜ.ಪಾ.ದ ಸಕ್ರೀಯ ಕಾರ್ಯಕರ್ತರಾಗಿದ್ದ ಶಾಂತೆಯಂಡ ರವಿಕುಶಾಲಪ್ಪರವರು ಪಕ್ಷ ನೀಡಿದ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ನಂತರ ಕೊಡಗು ಜಿ.ಪಂ.ಅಧ್ಯಕ್ಷರಾಗಿಯೂ  ಕಳೆದ ಸಾಲಿನಲ್ಲಿ ಭಾ.ಜ.ಪಾ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಇತ್ತೀಚೆಗಷ್ಟೆ  ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲ್ಲೂಕಿನ ಅಕ್ರಮ – ಸಕ್ರಮ ಸಮಿತಿಯ  ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ರಾಜ್ಯ ಸರಕಾರವು ಹೆಚ್ಚಿನ ಜವಾಬ್ದಾರಿಯನ್ನು ರವಿಕುಶಾಲಪ್ಪ ನೇತೃತ್ವದ ಸಮಿತಿಗೆ ವಹಿಸಿದೆ. ಈ ಸಮಿತಿಯ ಕಾರ್ಯದರ್ಶಿಯಾಗಿ ಐ.ಎಫ್.ಎಸ್. ದರ್ಜೆಯ ಅಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯ ಕೇಂದ್ರ ಕಛೇರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ.