7ನೇ ಹೊಸಕೋಟೆಯಲ್ಲಿ ಕಾಡಾನೆ ದಾಳಿ : ಬೆಳೆ ನಾಶ

05/12/2020

ಸುಂಟಿಕೊಪ್ಪ,ನ.4: 7ನೇ ಹೊಸಕೋಟೆ ಸುತ್ತ ಮತ್ತಲಿನ ಕೃಷಿ ಗದ್ದೆಗಳಿಗೆ ಕಾಡಾನೆಗಳ ದಾಳಿಯಿಂದ ಸಾವಿರಾರು ರೂ. ನಷ್ಟಗೊಳಿಸಿರುವ ಬಗ್ಗೆ ವರದಿಯಾಗಿದೆ.
ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ, ಬಾಳೆ ತೋಟಗಳಿಗೆ ನುಗ್ಗಿದ ಕಾಡಾನೆಗಳು ತಿಂದು ದ್ವಂಸಗೊಳಿಸುತ್ತಿವೆ ಗ್ರಾಮದ ಭಾಸ್ಕರ ರೈ ಎಂಬುವವರ ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಪೈರುಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ತಿಂದು ದ್ವಂಸಗೊಳಿಸಿದ್ದು ಇದರಿಂದ ಅಂದಾಜು ರೂ.40,000 ರಷ್ಟ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ರಾತ್ರಿ ವೇಳೆ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳು ಕಂಡುಬರುತ್ತಿದ್ದು ಈ ಭಾಗಗಳಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ.ಸಂಜೆಯಾಗುತ್ತಿದ್ದಂತೆ ಮೆಟ್ನಳ್ಳಿ ಸೇತುವೆ ಸಮೀಪ ಆನೆಕಾಡು ಅರಣ್ಯದಿಂದ ಕಾಡಾನೆಗಳು ಬರುತ್ತಿದ್ದು ಈ ಭಾಗದ ವಾಸ ಮಾಡುವ ಮನೆಯವರು ಭಯದಿಂದ ಕಾಲ ದೂಡುವಂತ್ತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.