ದೇಹಕ್ಕೆ ತಂಪು ನೀಡುವ ಗುಲ್ಕನ್‌ ರೆಸಿಪಿ

December 5, 2020

ಗುಲ್ಕನ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ದೇಹವನ್ನು ತಂಪು ಮಾಡಲು ಗುಲ್ಕನ್ ತಿಂದರೆ ಒಳ್ಳೆಯದು. ತಿನ್ನಲು ರುಚಿ, ದೇಹಕ್ಕೆ ತಂಪು ನೀಡುವ ಗುಲ್ಕನ್‌ಯನ್ನು ಮನೆಯಲ್ಲಿಯೆ ತಯಾರಿಸಬಹುದು. ಊಟದ ಜೊತೆ ಇದನ್ನು ತಿನ್ನುವುದರಿಂದ ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು. ಇದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಒಣಗಿದ ಗುಲಾಬಿಯ ಪಕಳೆಗಳು, 500 ಗ್ರಾಂ ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ, 500 ಗ್ರಾಂ ಸಕ್ಕರೆ ಮತ್ತು 1/2 ಲೋಟ ನೀರು

ತಯಾರಿಸುವ ವಿಧಾನ: ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವರೆಗೆ ಕುದಿಸಬೇಕು. ನಂತರ ಈ ಸಕ್ಕರೆ ಪಾನಕವನ್ನು ತಣ್ಣಗಾಗಲು ಬಿಡಬೇಕು. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು.

ಈ ಗುಲ್ಕನ್ ತುಂಬಾ ಗಟ್ಟಿಯಾಗುವುದನ್ನು ತಡೆಯಲು ಫ್ರಿಜ್‌ನಲ್ಲಿ ಇಡಬಾರದು.

ಇದನ್ನು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು. ಪ್ರತಿದಿನ ಹಾಗೇ ತಿನ್ನಬಹುದು, ದೋಸೆ ಜೊತೆ ತಿನ್ನಬಹುದು ಅಥವಾ ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.

error: Content is protected !!