ನೆಮ್ಮಲೆ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶ್ರಮದಾನ

December 6, 2020

ಮಡಿಕೇರಿ ಡಿ.6 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಟಿ.ಶೆಟ್ಟಿಗೇರಿ ಮಂಡಲ ಮತ್ತು ಕೆ.ಕೆ.ಆರ್ ಶಾಖೆ ವತಿಯಿಂದ ನೆಮ್ಮಲೆ ಪ್ರಾಥಮಿಕ ಶಾಲಾ ಆವರಣ ಹಾಗೂ ಆಟದ ಮೈದಾನದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಜಿಲ್ಲಾ ವನವಾಸಿ ಕಲ್ಯಾಣ ಉಪಾಧ್ಯಕ್ಷ ಚೆಟ್ಟಂಗಡ ಮಹೇಶ್ ಮಂದಣ್ಣ, ತಾಲೂಕು ಧರ್ಮ ಜಾಗರಣ ಸಂಯೋಜಕ್ ಕಟ್ಟೇರ ಬೋಪಣ್ಣ, ಸಂಘ ಪ್ರಚಾರಕ್ ಭುವನೇಶ್ವರ ಟಿ.ಶೆಟ್ಟಿಗೇರಿ ಮಂಡಲ ಸಹ ಕಾರ್ಯವಾಹಕ್ ಕಾಳಿಮಾಡ ಸೂರಜ್, ಮಂಡಲ ಕಾರ್ಯವಾಹ ಚೆಟ್ಟಂಗಡ ವಿನಯ್, ಕಾರ್ಯಕರ್ತರಾದ ವಿನು, ರಧೀಶ್, ಸತೀಶ್, ಅಪ್ಪಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

error: Content is protected !!