ಪ್ರಧಾನಿಯಿಂದ ಡಾ.ಅಂಬೇಡ್ಕರ್ ಸ್ಮರಣೆ

December 7, 2020

ನವದೆಹಲಿ ಡಿ.7 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ದೇಶದ ಗಣ್ಯರು, ರಾಜಕೀಯ ನಾಯಕರು, ಶ್ರೀಮಾನ್ಯರು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ಮುಂಬೈಯ ದಾದಾರ್ ನ ಚೈತ್ಯಭೂಮಿಯಲ್ಲಿ ಜನರು ಸಾಲಿನಲ್ಲಿ ನಿಂತು ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಿ ಮಹಾನ್ ಚೇತನಕ್ಕೆ ನಮಿಸಿದರು.
ಮಹಾ ಪರಿನಿರ್ವಾಣ ದಿನದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ನೆನೆಸಿಕೊಂಡಿದ್ದಾರೆ. ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ನಮ್ಮ ದೇಶದ ಬಗ್ಗೆ ಇಟ್ಟಿರುವ ಕನಸನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಾಬಾಸಾಹೇಬ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮೋದಿ ಸರ್ಕಾರ ಸಮಾಜದ ಏಳಿಗೆಗಾಗಿ, ದಶಕಗಳಿಂದ ತುಳಿತಕ್ಕೊಳಗಾದವರ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದಿದ್ದಾರೆ.

error: Content is protected !!