ಕೊಡಗಿನ ಹೇರಂಬ, ಹೇಮಂತ ಸಹೋದರರಿಗೆ “ರಾಗ ಲಯ ಪ್ರಭ” ಪ್ರಶಸ್ತಿ ಪ್ರದಾನ

07/12/2020

ಮಡಿಕೇರಿ ಡಿ.7 : (NEWS DESK) ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಕೊಡಗಿನ ಕೊಳಲು ವಾದಕ ಕಲಾವಿದರಾದ ಹೇರಂಬ ಹಾಗೂ ಹೇಮಂತ ಸಹೋದರರಿಗೆ ಬೆಂಗಳೂರಿನ ರಾಮ ಲಲಿತ ಕಲಾ ಮಂದಿರದ ಪ್ರತಿಷ್ಠಿತ “ರಾಗ ಲಯ ಪ್ರಭ” ಪ್ರಶಸ್ತಿ ಲಭಿಸಿದೆ. ಸಂಗೀತ ಕಲಾ ರತ್ನ ಡಾ.ಟಿ.ಎಸ್.ಸತ್ಯವತಿ ಅವರು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳ ಉಪಸ್ಥಿತಿಯಲ್ಲಿ ಗಾಯನ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಹೇರಂಬ, ಹೇಮಂತ ಸಹೋದರರು ಮಡಿಕೇರಿಯ ಅಂಬಳೆ ಸತ್ಯಪ್ರಸಾದ್ ಹಾಗೂ ಅಲಕಾನಂದ ದಂಪತಿಗಳ ಪುತ್ರರು.