FMSCI ನ್ಯಾಷನಲ್ ಬೈಕ್ ರ‍್ಯಾಲಿ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವಕ ಧನುಷ್ ಸಾಧನೆ

December 7, 2020

ಮಡಿಕೇರಿ ಡಿ. 7 : ಬೆಂಗಳೂರಿನಲ್ಲಿ ನಡೆದ ಎಂ.ಆರ್.ಎಫ್ ನ್ಯಾಷನಲ್ ಬೈಕ್ ರ‍್ಯಾಲಿಯಲ್ಲಿ ಕೊಡಗಿನ ಯುವಕ ಧನುಷ್ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಪುತ್ತೂರಿನಲ್ಲಿ ನಡೆದ ಕ್ವಾಲಿಫೈಡ್ ರೌಂಡ್‍ನಲ್ಲಿ ಪ್ರವೇಶ ಪಡೆದ ಧನುಷ್. ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ರ‍್ಯಾಲಿಯಲ್ಲಿ ಕೊಡಗಿನಿಂದ ಸ್ಪರ್ಧಿಸಿದ ಏಕೈಕ ರ‍್ಯಾಲಿಪಟು ಆಗಿದ್ದಾನೆ. ಈ ಮೂಲಕ ಕೊಡಗಿನ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆ ಮೂಲಕ ಧ್ವನಿಸುವಲ್ಲಿ ಯಶಸ್ವಿಯಾಗಿದ್ದಾರೆ.
21 ವರ್ಷದ ಧನುಷ್ ಕೊಡಗಿನ ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ನಿವಾಸಿಯಾಗಿದ್ದು. ಇವರು ರೇಖಾ ಹಾಗೂ ದಿಲೀಪ್ ಕುಮಾರ್ ಅವರ ಪುತ್ರ. ಸಣ್ಣವಯಸ್ಸಿನಿಂದಲೂ ಬೈಕನ್ನು ಹಚ್ಚಿಕೊಂಡಿರುವ ಧನುಷ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವ ನಿಟ್ಟಿನಲ್ಲಿ ಸಜ್ಜಾಗುತ್ತಿದ್ದಾರೆ.

ಎಂ.ಆರ್.ಎಫ್ ಸಂಸ್ಥೆಯವರು ವರ್ಷಂಪ್ರತಿ ಎಂ.ಆರ್.ಎಫ್, ಮೋಗ್ರಿಪ್, ಎಫ್‍ಎಂಎಸ್‍ಸಿಐ ರ‍್ಯಾಲಿ ಚಾಂಪಿಯನ್‍ಷಿಪ್-2ಡಬ್ಲ್ಯು-2020(MRF, MOGRIP, FMSCI NATIONAL RALLY CHAMPIONSHIP-2W,2020) ದ್ವಿಚಕ್ರ ವಾಹನಗಳ ರ‍್ಯಾಲಿಯನ್ನು ನಡೆಸಿಕೊಂಡು ಬರುತ್ತಿದ್ದು, 2020ರ ರ‍್ಯಾಲಿಯನ್ನು ಡಿ. 29 ರಂದು ಪುತ್ತೂರಿನ ಪಂಜ ಎಂಬಲ್ಲಿ ಮೊದಲನೇ ಸುತ್ತಿನ ರ‍್ಯಾಲಿಯನ್ನು ನಡೆಸಿರುತ್ತಾರೆ. ಕಳೆದ 10 ವರ್ಷದಲ್ಲಿ ಕೊಡಗಿನಿಂದ ಸ್ಪರ್ಧಿಗಳು ಯಾರೂ ಸ್ಪರ್ಧಿಸದೇ ಇರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೊಡಗಿನಿಂದ ಪಿ. ಧನುಶ್ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಎರಡನೇ ಸುತ್ತಿನ ರ‍್ಯಾಲಿಗೆ ಅರ್ಹರಾಗಿದ್ದರು. ಎರಡನೇ ಸುತ್ತಿನ ರ‍್ಯಾಲಿಯಲ್ಲಿ “ಸ್ಟಾರ್ ಆಫ್ ಕರ್ನಾಟಕ” ಕ್ಯಾಟಗರಿಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಧನುಷ್ ತಮ್ಮ ಸಣ್ಣ ವಯಸ್ಸಿನಿಂದಲೇ ದ್ವಿಚಕ್ರ ವಾಹನದ ಮೊಟೋಕ್ರಾಸ್ ಮತ್ತು ಆಟೋಕ್ರಾಸ್‍ನಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದು, ಪ್ರಸ್ತುತ ಇದೇ ಫೀಲ್ಡ್‍ನಲ್ಲಿ ಮುಂದುವರೆಯುವ ಇಚ್ಛೆ ಹೊಂದಿದ್ದಾರೆ. ಇವರ ಪ್ರತಿಭೆಗೆ ತಕ್ಕ ಸೂಕ್ತ ಪ್ರಾಯೋಜಕರು ದೊರಕಿದ್ದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

error: Content is protected !!