ಡಿ. 18 ರಂದು ನಾಪೋಕ್ಲುವಿನಲ್ಲಿ ವಾರ್ಷಿಕ ತೋಕ್ ನಮ್ಮೆ ಉತ್ಸವ

07/12/2020

ಮಡಿಕೇರಿ: ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ಡಿ. 18 ನಾಪೆÇೀಕ್ಲುವಿನ ಕೊಳಕೇರಿಯಲ್ಲಿ ‘ತೋಕ್ ನಮ್ಮೆ’(ಗನ್ ಕಾರ್ನಿವಲ್) ನಡೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ.

ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ತೋಕ್ ನಮ್ಮೆ ಸಂದರ್ಭ ಅಂಗೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕೊಡವ ನಾಗರಿಕತೆ ಉಗಮವಾದಂದಿನಿಂದಲೂ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಳಸುತ್ತಾ ಬಂದಿರುವ ಆಯುಧವನ್ನು ( ಅಂದು ಬಿಲ್ಲು-ಬಾಣ, ಈಟಿ-ಭರ್ಜಿ, ಇಂದು ತೋಕ್(ಬಂದೂಕು)-ಒಡಿಕತ್ತಿ) ನಿರಂತರವಾಗಿ ಪೂಜಿಸುವ ಪದ್ದತಿಯನ್ನು ಮುಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುವಂತೆ ಯುವ ಜನಾಂಗಕ್ಕೆ ಪ್ರೇರಣೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊಡವ ಯೋಧ ಬುಡಕಟ್ಟು ಕುಲದ ಗರ್ಭಗುಡಿಯಾದ `ನೆಲ್ಲಕ್ಕಿ’ಯಡಿಯಲ್ಲಿ ಪ್ರಧಾನ ಸ್ಥಾನ ಪಡೆದಿರುವ ಆಯುಧ-ಬಂದೂಕು, ಕೊಡವರ ಧಾರ್ಮಿಕ ಮತ್ತು ಸಾಂಸ್ಕøತಿಕ ಲಾಂಛನವಾಗಿದ್ದು ಅದನ್ನು ಸರಕಾರ ಮಾನ್ಯ ಮಾಡಿ ಗೌರವಿಸಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ಡಿ.18ರ ಪೂರ್ವಾಹ್ನ 10.30 ಗಂಟೆಗೆ ಕೊಳಕೇರಿಯ ಅಪ್ಪಚ್ಚಿರ ರಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಆರಂಭದಲ್ಲಿ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಬಂದೂಕು ಕುರಿತಾದ ತೋಕ್‍ಪಾಟ್ (ಕೋವಿ ಹಾಡು)ನೊಂದಿಗೆ ಬಂದೂಕಿಗೆ ಸಾಮೂಹಿಕ ಪೂಜೆ ನೆರವೇರಿಸಲಾಗುವುದು. ನಂತರ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವ ಸ್ಪರ್ಧೆ ಜರುಗಲಿದೆ. ಸ್ಪರ್ಧೆಯ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಅತ್ಯುತ್ತಮ ಗುರಿಕಾರ ಮಹಿಳೆ ಮತ್ತು ಪುರುಷರಿಗೆ ವಿಶೇಷ ಬಹುಮಾನ ನಿಡಲಾಗುತ್ತದೆ. ಇದೇ ಸಂದರ್ಭ ಯೋಧ ಪರಂಪರೆಯ ಕೊಡವ ಬುಡಕಟ್ಟು ಕುಲದ ಧಾರ್ಮಿಕ ಸಂಕೇತವಾದ ಕೋವಿ ಹಕ್ಕು ಅಬಾಧಿತವಾಗಿ ಮುಂದುವರೆಯಲು ಹಲವು ನಿರ್ಣಯ ಕೈಗೊಳ್ಳಲಾಗುವುದು ಎಂದು ನಾಚಪ್ಪ ಅವರು ತಿಳಿಸಿದ್ದಾರೆ.