ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭ

07/12/2020

ಮಡಿಕೇರಿ ಡಿ. 7 : ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಕರ್ನಾಟಕ ಕೌಶಲ್ಯ ತರಬೇತಿ ಕೇಂದ್ರವು ಮಡಿಕೇರಿ, ಶ್ರೀ ಸದ್ಗುರು ವಿದ್ಯಾ ಸಂಸ್ಥೆ (ಐ.ಟಿ.ಐ) ಶ್ರೀನಿಕೇತನ ಕಟ್ಟಡ, ಹಳೆ ಖಾಸಗಿ ಬಸ್ ನಿಲ್ದಾಣದ ಹತ್ತಿರ ಪ್ರಾರಂಭವಾಗಿದ್ದು. ಇಲ್ಲಿ ಸದ್ಯ ಸ್ವ-ಉದ್ಯೋಗದಡಿಯಲ್ಲಿ ಟೈಲರಿಂಗ್ ಮತ್ತು ಬ್ಯೂಟಿಷ್ಯನ್ ತರಬೇತಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಕೇವಲ 30 ಅಭ್ಯರ್ಥಿಗಳಿಗೆ ಅವಕಾಶವಿದ್ದು ಅರ್ಹರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7349077685 ನ್ನು ಸಂರ್ಪಕಿಸಬಹುದು.