ವಿರಾಜಪೇಟೆಯಲ್ಲಿ ಡಿ.21 ರಂದು ಸಾಹಿತ್ಯ ಸಂಭ್ರಮ : ಐ.ಮಾ.ಮುತ್ತಣ್ಣ ಮತ್ತು ಬಿ.ಡಿ.ಗಣಪತಿ ಅವರ ಜನ್ಮ ಶತಮಾನೋತ್ಸವ

07/12/2020

ಮಡಿಕೇರಿ ಡಿ. 7 : ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಾಹಿತ್ಯ ಸಂಭ್ರಮ ಹಾಗೂ ಲೇಖಕರಾದ ಐ.ಮಾ.ಮುತ್ತಣ್ಣ, ಬಿ.ಡಿ.ಗಣಪತಿ ಅವರ ಜನ್ಮ ಶತಮಾನೋತ್ಸವದ ನೆನಪು ಕಾರ್ಯಕ್ರಮವು ಡಿಸೆಂಬರ್, 21 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ.
ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಾಷಣ ಸ್ಪರ್ಧೆ, ಜಿಲ್ಲೆಯ ಕವಿಗಳಿಗೆ ಸ್ವ ರಚಿತ ಗೀತೆಗಳ ಗಾಯನ ಗೋಷ್ಠಿ ಹಾಗೂ ಹಿರಿಯ ಕವಿಗಳಾದ ದಿವಂಗತ ಐ.ಮಾ.ಮುತ್ತಣ್ಣ ಹಾಗೂ ಬಿ.ಡಿ.ಗಣಪತಿ ಅವರ ಜನ್ಮ ಶತಮಾನೋತ್ಸವದ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯುವ ಭಾಷಣ ಸ್ಪರ್ಧೆ ಜಿಲ್ಲಾ ಮಟ್ಟದಾಗಿದ್ದು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕವಿ ಕಲಾವಿದರ ಕೊಡುಗೆ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಆಸಕ್ತಿಗೆ ಅವಕಾಶ ನೀಡಲಾಗುವುದು. 3 ನಿಮಿಷಗಳ ಗರಿಷ್ಠ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಬೇಕು. ಸ್ವ ರಚಿತ ಗೀತೆಗಳ ಗಾಯನ ಗೋಷ್ಠಿಯಲ್ಲಿ ಕೊಡಗಿನ ಕವಿಗಳಿಗೆ ಅವಕಾಶ ನೀಡಲಾಗುವುದು. ಮೊದಲು ಬಂದ 2 ಕವಿಗಳಿಗೆ ಅವಕಾಶ ಸೀಮಿತವಾಗಿರುತ್ತದೆ. ಕವಿಗಳು ತಮ್ಮ ಸ್ವಂತ ರಚನೆಯ ಗೀತೆಗಳನ್ನು ರಾಗ ಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸಬಹುದಾಗಿದೆ.
ಭಾಷಣ ಸ್ಪರ್ಧೆ ಮತ್ತು ಗೀತಗಾಯನ ಗೋಷ್ಠಿಗೆ ಹೆಸರನ್ನು ನೋಂದಾಯಿಸಲು ಡಿಸೆಂಬರ್, 18 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳು ಹಾಗೂ ನೋಂದಾವಣೆಗೆ ಮುಲ್ಲೇಂಗಡ ಮಧೋಶ್ ಪೂವಯ್ಯ 9480556667, ಎಂ.ಕೆ.ನಳಿನಾಕ್ಷಿ ಮೊ. 9611018818 ನ್ನು ಸಂಪರ್ಕಿಸಬಹುದು ಎಂದು ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರು ತಿಳಿಸಿದ್ದಾರೆ.