ಬಂದೂಕು ಠೇವಣಿ : ಜಿಲ್ಲಾಧಿಕಾರಿ ಸ್ಪಷ್ಟನೆ

07/12/2020

ಮಡಿಕೇರಿ ಡಿ.7 : ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕರು ಹೊಂದಿರುವ ಆಯುಧ (ಗನ್/ರಿವಾಲ್ವರ್ ಇತ್ಯಾದಿ) ಚುನಾವಣೆಗಳು ಮುಕ್ತಾಯವಾಗುವವರೆಗೆ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಹಿಂದಿರುಗಿಸುವಂತೆ(Surrender) ಕರ್ನಾಟಕ ಆಯುಧಗಳ (Arms Act)ಅಧಿನಿಯಮದಡಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಈ ಸೂಚನೆಯನ್ವಯ ಕೊಡಗು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಬಂದೂಕು ಪರವಾನಗಿ ಹೊಂದಿರುವವರು ಅವರ ಬಳಿ ಇರುವ ಬಂದೂಕುಗಳನ್ನು ಡಿಸೆಂಬರ್, 08 ರ ಸಂಜೆ 5 ಗಂಟೆಯ ಒಳಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ಆದೇಶ ಹೊರಡಿಸಲಾಗಿದೆ. ಬಂದೂಕುಗಳು ಡಿಸೆಂಬರ್, 31 ರವರೆಗೆ ಠೇವಣಿಯಲ್ಲಿರತಕ್ಕದ್ದು. ಪ್ರತಿ ಬಾರಿ ಚುನಾವಣಾ ಸಮಯದಲ್ಲಿ ಅನುಸರಿಸುತ್ತಿದ್ದಂತೆ ಈ ಬಾರಿಯೂ ಸಹ ಆದೇಶ ಹೊರಡಿಸಲಾಗಿದ್ದು, ಆದೇಶದಂತೆ ಬಂದೂಕು ಪರವಾನಗಿ ಹೊಂದಿರುವ ಎಲ್ಲರೂ(gun License Holders)ಬಂದೂಕುಗಳನ್ನು ಠೇವಣಿ ಇರಿಸಬೇಕಾಗಿದೆ. ಬಂದೂಕು ವಿನಾಯಿತಿ ಪತ್ರ(Exemption Certificate) ಹೊಂದಿರುವವರಿಗೆ ಠೇವಣಿಯಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ವ್ಯಕ್ತಿಗಳು ಬಂದೂಕು ವಿನಾಯಿತಿ ಪತ್ರ ಹೊಂದಿದ್ದರೆ ಅವರು ಸಹ ಬಂದೂಕನ್ನು ಠೇವಣಿ ಇರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟನೆ ನೀಡಿದ್ದಾರೆ.