ರಸ್ತೆಬದಿಯಲ್ಲಿ ತ್ಯಾಜ್ಯ ಎಸೆತ : ಕಡಗದಾಳು ಪಂಚಾತಿಯಿಂದ ದಂಡ

07/12/2020

ಮಡಿಕೇರಿ ಡಿ. 7 : ಯುವಕನೊಬ್ಬ ಹೋಂಸ್ಟೇ ಯಲ್ಲಿನ ತರಕಾರಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೋರಿಯೊಳೆಗೆ ಎಸೆದು ತೆರಳುತ್ತಿದ್ದ ಸಂದರ್ಭ ಕಡಗದಾಳು ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಮಾದೇಟಿರ ತಿಮ್ಮಯ್ಯ ತನ್ನ ಜೀಪಿನಲ್ಲಿ ಅಡ್ಡಗಟ್ಟಿ ಯುವಕನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಮಾಲಿಕ ಕಸವನ್ನು ಎಸೆಯಲು ತಿಳಿಸಿದ ಬಗ್ಗೆ ಯುವಕ ಹೇಳಿದ ಕಾರಣ ಮಾಲೀಕರಿಗೆ ಯುವಕನಿಂದಲೇ ಫೋನಾಯಿಸಿ ಸ್ಥಳಕ್ಕೆ ಬರಲು ಹೇಳಿದರು. ಹೋಂಸ್ಟೇ ಮಾಲೀಕ ಹಾಗೂ ಮಡಿಕೇರಿ ಖಾಸಗೀ ವಿದ್ಯಾಸಂಸ್ಥೆಯ ಮುಖ್ಯೋಪದ್ಯಾಯನಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಾದೇಟಿರ ತಿಮ್ಮಯ್ಯ, ಕೊಡಗು ಜಿಲ್ಲಾ ಹೋಂಸ್ಟೇ ಮಾಲಿಕರ ಸಂಘದ ಅಧ್ಯಕ್ಷ ಅನಂತಶಯನ, ಪುತ್ತರಿರ ಪಪ್ಪುತಿಮ್ಮಯ್ಯ ಕಡಗದಾಳು ಪಂಚಾಯಿತಿ ಪಿಡಿಓ ದೇವಿಕಾ ಹಾಗೂ ಕಾರ್ಯದರ್ಶಿ ಕುಮಾರ ಸ್ವಾಮಿ ಅವರು ಹೋಂಸ್ಟೇ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಪಂಚಾಯಿತಿ ಪಿಡಿಓ 1000 ರೂ. ದಂಡವಿಧಿಸಿದರು.
ಸಾಮಾಜಿಕ ಕಾರ್ಯಕರ್ತ ಮಾದೇಟಿರ ತಿಮ್ಮಯ್ಯನವರು ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವನ್ನು ಹಾಕಿದ ಹಲವರನ್ನು ಸ್ಥಳಕ್ಕೆ ಕರೆಸುವ ಮೂಲಕ ತ್ಯಾಜ್ಯವನ್ನು ಅವರಿಂದಲೇ ತೆಗೆಸಿ ಕಳುಸಿದ ಪ್ರಕರಣಗಳು ಕಳೆದ ನಾಲ್ಕೈದು ವಾರಗಳ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತಿದ್ದವು.
ಕರುಣ್‍ಕಾಳಯ್ಯ