ತರಕಾರಿ ಲಾರಿಯಲ್ಲಿ ಬೀಟೆ ಸಾಗಾಟ : ಮಾಲು ಸಹಿತ ಆರೋಪಿ ವಶ

December 8, 2020

ತರಕಾರಿ ಲಾರಿಯಲ್ಲಿ ಬೀಟೆ ಸಾಗಾಟ : ಮಾಲು ಸಹಿತ ಆರೋಪಿ ವಶ
ಮಡಿಕೇರಿ : ಕಾಫಿ ತೋಟವೊಂದರಿಂದ ಅಕ್ರಮವಾಗಿ ಬೀಟೆ ಮರವನ್ನು ಕಡಿದು ತರಕಾರಿ ತುಂಬಿದ ಮಿನಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಮತ್ತು ಮಾಲು ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಪೆÇೀಲಿಸರು ಸಿದ್ದಾಪುರ ಸಮೀಪ ಬಿ ಶೆಟ್ಟಿಗೇರಿ ಲಾರಿಯನ್ನು ಗುಡ್ಡೆಹೊಸೂರು ಬಳಿ ಅಡಗಟ್ಟಿದ್ದಾರೆ. ವಾಹನದಲ್ಲಿದ್ದ ಮೂವರು ಪರಾರಿಯಾದರೆ ಓರ್ವನನ್ನು ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆಯ ಮಹಮ್ಮದ್ ಇನಾಯತ್ ಎಂಬುವರಿಗೆ ಸೇರಿದ ಅಶೋಕ್ ಲೈಲ್ಯಾಂಡ್ ಮಿನಿ ಲಾರಿಯಲ್ಲಿ ತರಕಾರಿಗಳನ್ನು ಮೇಲಿಟ್ಟು ಕೆಳ ಭಾಗದಲ್ಲಿ 23 ಬೀಟೆ ನಾಟಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅರೋಪಿ ಮಹಮ್ಮದ್ ಇನಾಯತ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಕುಶಾಲನಗರ ಗ್ರಾಮಾಂತರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!