ಕುಶಾಲನಗರದಲ್ಲಿ ಅಕ್ರಮ ಮದ್ಯ ವಶ

08/12/2020

ಮಡಿಕೇರಿ ಡಿ.8 : ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ 10.5 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಅಬ್ಕಾರಿ ಅಧಿಕಾರಿಗಳು ದಸ್ತಗಿರಿಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದಲ್ಲಿ ಜಪ್ತುಪಡಿಸಲಾದ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ ರೂ.22,05,040 ನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಸಿ.ಲಕ್ಷ್ಮೀಶ ಅವರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಬಕಾರಿ ಹಿರಿಯ ರಕ್ಷಕರಾದ ಕೆ.ಎಸ್.ಉತ್ತಪ್ಪ, ಕೆ.ಎಸ್.ರಾಜು ಮತ್ತು ಅಬಕಾರಿ ರಕ್ಷಕರಾದ ಶಿವಣ್ಣ, ವಾಹನ ಚಾಲಕರಾದ ಸುನೀಲ್ ಕುಶಾಲಪ್ಪ ಇತರರು ಹಾಜರಿದ್ದರು.