Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
12:08 AM Tuesday 26-October 2021

ಕೃಷಿ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ : ರೈತ ಸಂಘ, ಪೊಲೀಸರ ನಡುವೆ ಮಾತಿನ ಚಕಮಕಿ : ಕೊಡಗಿನಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ

08/12/2020

ಮಡಿಕೇರಿ ಡಿ.8 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‍ಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ರೈತ ಸಂಘಟನೆಗಳ ಪ್ರಮುಖರು ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಜಿಲ್ಲೆಯಾದ್ಯಂತ ಜನಜೀವನ ಸಾಮಾನ್ಯವಾಗಿತ್ತು, ದಕ್ಷಿಣ ಕೊಡಗಿನ ಪೊನ್ನಂಪೇಟೆ ಸೇರಿದಂತೆ ಕೆಲವೆಡೆ ಬಂದ್ ನಡೆಸುವ ರೈತ ಸಂಘದ ಪ್ರಯತ್ನಗಳು ರೈತ ಸಂಘದಿಂದ ನಡೆ ನಡೆಯಿತು.
ಜಿಲ್ಲಾ ಕೇಂದ್ರ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ‘ಮಾನವ ಸರಪಳಿ’ ರಚಿಸಿ, ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಮೂಲಕ ಅಪರ ಜಿಲ್ಲಾಧಿಕಾರಿ ರೂಪ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿ ಮಾಡುವ ಮೂಲಕ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಪ್ರಸ್ತುತ ಬೆಳೆದ ಬೆಲೆಗೆ ಯೋಗ್ಯ ಧಾರಣೆ ದೊರಕದಿರುವುದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೆ ಎಂದು ಪ್ರಶ್ನಿಸಿದ ಅವರು, 1993-94 ರಲ್ಲಿ ಕಾಫಿ ಮುಕ್ತ ಮಾರುಕಟ್ಟೆಗೆ ಬಂದ ಹಂತದಲ್ಲಿ ಉತ್ತಮ ಧಾರಣೆ ಲಭಿಸಿತ್ತಾದರೆ, ಇಂದು ಆ ದರ 3 ಸಾವಿರ ರೂ.ಗಳ ಆಸು ಪಾಸಿನಲ್ಲಿದೆ, ಅದೇ ರೀತಿ ಕಾಳು ಮೆಣಸಿನ ದರ ಪಾತಾಳಕ್ಕೆ ಕುಸಿದಿದೆ. ಇದನ್ನು ನಿಯಂತ್ರಿಸಲು ಕಾಯ್ದೆಗಳನ್ನು ಜಾರಿಗೆ ತಂದರಷ್ಟೆ ಸಾಲದು, ನಮ್ಮ ಆಮದು ನೀತಿಯನ್ನು ಬದಲಿಸುವ ಅಗತ್ಯವಿದೆಯೆಂದು ತೀಕ್ಷ್ಣವಾಗಿ ನುಡಿದು, ಬೆಳೆದ ಬೆಲೆಗೆ ಯೋಗ್ಯ ಧಾರಣೆ ಒದಗಿಸಲು ಸ್ವಾಮಿನಾಥನ್ ವರದಿಯನ್ನು ಜಾರಿ ಗೊಳಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಮಾತನಾಡಿ, ಇದು ರೈತ ವಿರೋಧಿ ಕಾಯ್ದೆಯಾಗಿದ್ದು ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ದೇಶದ ಆದಾಯ ಮೂಲವಾಗಿರುವ ಕೃಷಿಗೆ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಬಗ್ಗೆ ನಿರಂತರ ಹೋರಾಟ ರೂಪಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಟೀಕಿಸಿ, ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯದಿರಲಿ ಎಂದು ಕಟುವಾಗಿ ನುಡಿದರು.
ರೈತ ಮುಖಂಡ ಪುಚ್ಚಿಮಾಡ ಅಶೋಕ್, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ದಸಂಸ ಸಂಚಾಲಕ ಪರಶುರಾಮ್, ಜಮಾತೇ ಇಸ್ಲಾಂ ಹಿಂದ್ ಅಧ್ಯಕ್ಷ ಹನೀಫ್ ಮಾತನಾಡಿದರು.
::: ಪೊಲೀಸರೊಂದಿಗೆ ವಾಗ್ವಾದ :::
ಪ್ರತಿಭಟನೆ ವೇಳೆ ಪೊಲೀಸರು ಮತ್ತು ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.ರಸ್ತೆ ತಡೆ ಮಾಡದಂತೆ ಪೊಲೀಸರು ಹೇಳಿದಾಗ ರೈತ ಮುಖಂಡರು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪುಚ್ಚಿಮಾಡ ಸುಭಾμï, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ, ಮುಖಂಡರಾದ ಪುಚ್ಚಿಮಾಡ ಅಶೋಕ್, ಮಹೇಶ್, ತೀತಮಾಡ ರಾಜ, ಅಶೋಕ್, ಗಿರೀಶ, ದಿನೇಶ್, ಚೆಪ್ಪುಡಿರ ರೋಶನ್, ಎಂ.ಬಿ ಅಶೋಕ್, ರಮೇಶ್, ದಿನೇಶ್, ಗಾಣಗಂಡ ಉತ್ತಯ್ಯ, ಕಾಯಪಂಡ ಡಾಲಿ, ಜಯಪ್ರಕಾಶ್ ಮೊದಲಾದವರಿದ್ದರು.