ಪೊನ್ನಂಪೇಟೆಯಲ್ಲಿ ಐಟಿಐ ತರಬೇತಿಗೆ ಅರ್ಜಿ ಆಹ್ವಾನ

08/12/2020

ಮಡಿಕೇರಿ ಡಿ.08 : ಪೊನ್ನಂಪೇಟೆ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2020ನೇ ಸಾಲಿನ ಪ್ರವೇಶಕ್ಕೆ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಮೆಕಾನಿಕ್(2 ವರ್ಷ), ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (1 ವರ್ಷ) ವೃತ್ತಿಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಡಿಸೆಂಬರ್, 08 ರಿಂದ 12 ರವರೆಗೆ ಆಫ್‍ಲೈನ್ ಪ್ರವೇಶ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಪೊನ್ನಂಪೇಟೆ ಇವರನ್ನು ಕೆಲಸದ ವೇಳೆಯಲ್ಲಿ ಅಥವಾ ದೂ.ಸಂ.08274-249638 ಅಥವಾ ಮೊ.ಸಂ.9036796935 ಮತ್ತು 8971358220 ನ್ನು ಸಂಪರ್ಕಿಸಬಹುದು ಎಂದು ಪೊನ್ನಂಪೇಟೆ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಯೋಗೇಶ್ ಅವರು ತಿಳಿಸಿದ್ದಾರೆ.