ಡಿ. 10 ರಂದು ಕುಶಾಲನಗರದಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ

December 8, 2020

ಮಡಿಕೇರಿ ಡಿ. 8 : ಇಸ್ಲಾಮಿನ ಸಂದೇಶವನ್ನು ಸಮಾಜಕ್ಕೆ ನೀಡುವ ಸಲುವಾಗಿ ಕುಶಾಲನಗರದ ಎಸ್‍ಕೆಎಸ್‍ಬಿವಿ ದಾರುಲ್ ಉಲೂಂ ಮದ್ರಸದ ಅಧೀನದಲ್ಲಿ ಡಿ. 10 ರಂದು “ಮಾನವೀಯತೆ ಮರೆಯಾಗದಿರಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಮಾನವ ಹಕ್ಕು ದಿನಾಚರಣೆಯನ್ನು ಆಚರಿಸಲಾಗುವುದು ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲ ಎಂ. ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕುಶಾಲನಗರದ ಉಲೂಂ ಮದ್ರಸದಲ್ಲಿ ಬೆಳಿಗ್ಗೆ 7:30ಕ್ಕೆ ಸ್ಥಳೀಯ ಖತೀಬರಾದ ಸೂಫಿ ದಾರಿಮಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ದಾರುಲ್ ಉಲೂಂ ಮದ್ರಸ ಸಮಿತಿಯ ವ್ಯವಸ್ಥಾಪಕ ಉನೈಸ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‍ಕೆಎಸ್‍ಬಿವಿ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ರಾಫಿ, ಅಧ್ಯಕ್ಷ ಮೂನಿಸ್ ಕನ್ನಡ ಪ್ರಬಂಧ ಹಾಗೂ ಮೀಡಿಯಾ ವಿಂಗ್ ಮುಖ್ಯಸ್ಥ ಮುಹಮ್ಮದ್ ಝಾಹಿದ್ ಇಂಗ್ಲೀಷ್ ಪ್ರಬಂಧವನ್ನು ಮಂಡಿಸಲಿದ್ದಾರೆ ಎಂದರು.
ಎಸ್‍ಕೆಎಸ್‍ಬಿವಿ ಕನ್ವೀನರ್ ಇಬ್ರಾಹಿಂ ಬಾತಿಷಾ ಶಂಸಿ, ಹಿಲಾಲ್ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಮಾಜಿ ಅಧ್ಯಕ್ಷ ಸಲೀಂ ಸೇರಿದಂತೆ ಆಡಳಿತ ಸಮಿತಿ ಹಾಗೂ ಯೂತ್ ಅಸೋಸಿಯೇಷನ್ ಸದಸ್ಯರು ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ತಮ್ಲೀಖ್ ದಾರಿಮಿ ತಿಳಿಸಿದರು.

ತಮ್ಲೀಖ್ ದಾರಿಮಿ

error: Content is protected !!