ಚಿನ್ನದ ದರದಲ್ಲಿ ಭಾರೀ ಏರಿಕೆ

09/12/2020

ನವದೆಹಲಿ ಡಿ. 9 : ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಮ್‍ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು, ಕೆ.ಜಿ. ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ. ಚಿನ್ನದ ಈ ಹಿಂದಿನ ದರ 10 ಗ್ರಾಮ್‍ಗೆ 48,614 ರೂಪಾಯಿಗಳಷ್ಟಿತ್ತು.