ಕಾಣದ ದೇವರಿಗೆ ಒಂದು ಪತ್ರ….

December 9, 2020

ಮಡಿಕೇರಿ ಡಿ. 9 : ದೇವರು ಅಜರಾಮರ ಅವನು ಎಲ್ಲಿದ್ದಾನೆ ಅಂದ್ರೆ ಉತ್ತರ ಮಾತ್ರ ಸಿಗೋಲ್ಲ. ಆದ್ರೂ ಜನ ದೇವರನ್ನು ವಿಗ್ರಹ ದಲ್ಲಿ ಪೂಜಿಸುವ ಮೂಲಕ ಕಾಣುತ್ತಾರೆ.

ಆಶ್ಚರ್ಯ ವಾಗಬಹುದು ಇವ್ನು ಯಾಕೇ ದೇವರು ಬಗ್ಗೆ ಮಾತಾಡು ತಿದ್ದ ಅಂತ ಹೌದು ನಾನು ಹೇಳೋದು ಕಲ್ಲು ದೇವರ ಬಗ್ಗೆ ಅಲ್ಲ ತನ್ನ ರಕ್ತ ವನ್ನು ಜೀವ ಮಾಡಿ ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಬೆವರು ಹನಿಯನ್ನು ಅಮೃತವಾಗಿ ಮಾಡಿ ಹಾಲೆರದು ಈ ಭೂಮಿಗೆ ತಂದ ಆ ತಾಯಿ ಬಗ್ಗೆ.

ನಿಜ ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣೆದುರು ಕಾಣೋ ತಾಯಿ ದೇವರು ಶ್ರೇಷ್ಠ ಅಂದರೆ ತಪ್ಪಿಲ್ಲ. ಈ ಜಗತ್ತಿನಲ್ಲಿ ಏನು ಬೇಕಾದ್ರು ಸಿಗುತ್ತೆ ಆದರೆ ಹೆತ್ತ ತಾಯಿ ಸಿಗಲ್ಲ. ತಾಯಿ ಅಂದರೆ ನಿಜ ದೇವರು ಆ ದೇವರಿಗೆ ಎಷ್ಟು ಪೂಜೆ ಮಾಡಿದ್ರು ಪಾಪ ತೀರಲ್ಲ ಆದರೂ ಮನುಜ ಎಂಬ ಬುದ್ದಿವಂತ ಪ್ರಾಣಿ ಮಾತ್ರ ತಾಯಿ ಎಂಬ ದೇವತೆಗೆ ನೋವು ಕೊಟ್ಟು ತಾನು ತನ್ನನ್ನು ನಂಬಿ ಬಂದ ಅರ್ಧಂಗಿಗೆ ಸೋತಿದ್ದಾನೆ. ನಿಜ ಮಡದಿ ಕೂಡಾ ಒಂದು ಹೆಣ್ಣು ಮುಂದೆ ಅವಳಿಗೂ ಮಗು ಆಗುತ್ತೆ ಅವಳೊಂದು ದಿನ ಮುಪ್ಪು ಬಂದು ಇಂಥ ಸಮಸ್ಯೆಗೆ ಈಡಾಗುತ್ತಾಳೆ ಅನ್ನೋದು ಅರಿವಿಗೆ ಬಂದಾಗ ಅರ್ಥ ಆಗಬಹುದು. ಏನೇ ಹೇಳಿ ತಾಯಿ ಜನುಮ ನೀಡೋ ವಾಗ ಅನುಭವಿಸೋ ನೋವು ಮಾತ್ರ ಏಳು ಸಮುದ್ರ ದಾಟಿ ಗೆದ್ದು ಬಂದ ವಿಜಯವೇ ಸರಿ. ಅದಕ್ಕೆ ಹೇಳೋದು ತಾಯಿ ದೇವರ ಮುಂದೆ ಎಲ್ಲಾ ದೇವಾ ದೀ ದೇವತೆಗಳು ಕಾಲಡಿ ಬರಬೇಕು ಅಂಥ ತಿಳಿದವರು ಹೇಳಿರೋದು.

ಜಗತ್ತು ವಿಶಾಲವಾಗಿದೆ ಎಲ್ಲಾ ಪ್ರಾಣಿ ಸಂಕುಲ ವಿದೆ ಆದರೆ ತಾಯಿ ಪಾತ್ರ ಒಂದೇ ತರ ವಾದ್ರೂ ಭಿನ್ನ ವಾಗಿರುತ್ತದೆ. ತಾಯಿ ಒಂದು ಹೆಣ್ಣಾಗಿ ಒಂದು ಜೀವ ಕೊಟ್ಟು ಜೀವನದ ಪಾಠ ಹೇಳಿ ಈ ಸಮಾಜದಲ್ಲಿ ಸ್ಥಾನವನ್ನು ಗಟ್ಟಿ ಗೊಳಿಸಿ ತಾನು ನೀಡಿದ ಜೀವಕ್ಕೆ ಅಸ್ಥಿತ್ವ ಒದಗಿಸುವ ಜವಾಬ್ದಾರಿ ನಿರ್ವಹಿಸುತ್ತಿರುವುದು ಗಮನಿಸಬೇಕಾದ ಅಂಶ. ಅದಕ್ಕೆ ಹೇಳಿದ್ದು ತಾಯಿ ದೇವರು ಮಾತ್ರ ಕರುಣಾಮಯಿ ಅವಳಿಗೆ ಎಲ್ಲಾ ಮಕ್ಕಳು ಒಂದೇ ಬೇಧ ಮಾಡಲ್ಲ. ಅದಕ್ಕೆ ನಾನು ಹೇಳಿದ್ದು ಕಾಣದ ದೇವ್ರಿಗೆ ಒಂದು ಪತ್ರ ಬರೆದು ಕಾಣುವ ನಿಜ ದೇವರು ತಾಯಿಯನ್ನು ದೀರ್ಘ ಆಯಸ್ಸು ನೀಡಿ ಕಾಪಾಡು ಅಂತ ಕೇಳೋಣ ಅಂತ ಅಂದುಕೊಂಡೆ ಅದು ಸಾಧ್ಯವೇ?…

ಪ್ರಶ್ನೆ ಮಾತ್ರ ಇದೆ ಉತ್ತರ ಬಲುದೂರ…. ಎಲ್ಲಾ ಕಾಲದ ಮಹಿಮೆ ಯಾವಾಗ ಏನು ಆಗಬೇಕೋ ಅದು ನಡೆಯ ಬೇಕು. ಅದೇ ಸೃಷ್ಟಿಯ ನಿಯಮ ಕೂಡ ಹಣೆಬರಹ ಬರೆವ ಬ್ರಹ್ಮನಿಗೆ ಬಿಟ್ಟರೆ ಬೇರೆಯವರಿಗೆ ತಿಳಿಯದು…

ಬರಹ : ಎ. ಟಿ. ಮಂಜುನಾಥ್ ಬಾಳೆಲೆ

ಎ. ಟಿ. ಮಂಜುನಾಥ್ ಬಾಳೆಲೆ

error: Content is protected !!