ಕೊಡಗು ಸುನ್ನಿ ವೆಲ್ಫೇರ್, ಯುಎಇ ಸಮಿತಿಯಿಂದ ಯುಎಇ ರಾಷ್ಟ್ರೀಯ ದಿನಾಚರಣೆ

December 9, 2020

ಮಡಿಕೇರಿ ಡಿ. 9 : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು. ಎ. ಇ ಸಮಿತಿ ವತಿಯಿಂದ ದುಬೈ ಯಲ್ಲಿರುವ ಮುಶ್ರಿಫ್ ಉದ್ಯಾನವನದಲ್ಲಿ ಯು, ಎ, ಇ, ಯ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ವಿಭಿನ್ನ ಕಾರ್ಯಕ್ರಮ ಗಳೊಂದಿಗೆ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಯು.ಏ. ಇ ರಾಷ್ಟ್ರ ಗೀತೆಯಿಂದ ಪ್ರಾರಂಭವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೊಡಗು ಜಿಲ್ಲೆಯ ಅನಿವಾಸಿಗಳಾದ ಹಲವಾರು ಕುಟುಂಬ ಸಮೇತ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಗಳು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು.ಎ.ಇ ಯ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ, ಹಾಗೂ ಸಲಹ ಸಮಿತಿಯ ಸದಸ್ಯ ಉಸ್ಮಾನ್ ಹಾಜಿ ನಾಪೋಕ್ಲು ಅವರ ನೇತ್ರತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಯು, ಎ, ಇ, ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡ್, ಕೋಶಾಧಿಕಾರಿ ಅಹಮದ್ ಚಾಮಿಯಾಲ್, ಸಹ ಕಾರ್ಯದರ್ಶಿ ನಜೀಬ್ ಕಡಂಗ, ಕನ್ವಿನಿಯರ್ ರಿಯಾಜ್ ಕೊಂಡಂಗೇರಿ, ಸಂಘಟನೆಯ ಕ್ಯಾಬಿನೆಟ್ ಸದಸ್ಯರಾದ ಹಾರಿಸ್ ಕುಂಜಿಲ, ಇಬ್ರಾಹಿಂ ನಾಪೋಕ್ಲು, ಝಕರಿಯ ಗುಂಡಿಯರೆ ಉಪಸ್ಥಿತರಿದ್ದರು. ಹಲವು ನಾಯಕರು ಸದಸ್ಯರುಗಳಾದ ನಾಸರ್ ನಹೀಮಿ, ಶುಕೂರ್ ನಾಪೋಕ್ಲು, ಅಹಮದ್ ಮೂರ್ನಾಡ್, ನೌಫಲ್ ನಾಪೋಕ್ಲು, ತನ್ವಿರ್ ನಾಪೋಕ್ಲು, ನಿಯಾಜ್ ನಾಪೋಕ್ಲು ಭಾಗವಹಿಸಿದ್ದರು.

error: Content is protected !!