ಸುಂಟಿಕೊಪ್ಪ : ಎಟಿಎಂನಲ್ಲಿ ದೊರೆತ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ಯುವಕರು

09/12/2020

ಸುಂಟಿಕೊಪ್ಪ 9 : ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ತೆರಳಿದ ವ್ಯಕ್ತಿಯೋರ್ವನು ತನ್ನ ಖಾತೆಯಿಂದ ಹಣ ಪಡೆಯಲು ಪ್ರಯತ್ನಿಸಿದ್ದು, ನೆಟ್‍ವರ್ಕ್ ಇಲ್ಲದ ಕಾರಣ ಹಣ ಬರದಿದ್ದಾಗ ಮರಳಿ ಮನೆಗೆ ತೆರಳಿದ್ದಾನೆ. ಆನಂತರ ಎಟಿಎಂ ಕೇಂದ್ರಕ್ಕೆ ಹಣ ಡ್ರಾ ಮಾಡಲು ಬಂದ ಮತ್ತೋರ್ವ ಗ್ರಾಹಕನಿಗೆ ಹಣ ಲಭಿಸಿದ್ದು, ಬ್ಯಾಂಕಿನ ವ್ಯವಸ್ಥಾಪಕ ಚೇತನ್ ಅವರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸುಂಟಿಕೊಪ್ಪ ಕರ್ನಾಟಕ ಬ್ಯಾಂಕಿನಿಂದ ಮಂಗಳವಾರ ಶ್ರೀ ರಾಮ ಬಡಾವಣೆಯ ನಿವಾಸಿಯೊಬ್ಬರು ಎಟಿಎಂನಿಂದ ಹಣ ಪಡೆಯುವ ಸಲುವಾಗಿ ಬಂದಿದ್ದು, ನೆಟ್‍ವರ್ಕ್ ಸಮಸ್ಯೆಯಿಂದ ಹಣ ಬಾರದಿದ್ದಾಗ ವಾಪಾಸ್ಸು ಮನೆಗೆ ತೆರಳಿದ್ದರು. ಇದೇ ಸಂದರ್ಭ ಈ ಎಟಿಎಂ ನಿಂದ ಹಣ ಪಡೆಯಲು ಬಂದ ಪಂಪ್ ಹೌಸ್ ನಿವಾಸಿಗಳಾದ ಸಯ್ಯದ್ ಸಾಜನ್ ಹಾಗೂ ಇರ್ಷಾದ್ ಬಂದ ಸಂದರ್ಭ ರೂ. 4,500 ಹೊರ ಬಂದಿದೆ. ವಾರಸುದಾರರು ಇಲ್ಲದ ಕಾರಣ ಬ್ಯಾಂಕಿನ ವ್ಯವಸ್ಥಾಪಕ ಚೇತನ್ ಅವರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ನಂತರ ವ್ಯವಸ್ಥಾಕರು ಸಿಸಿ ಕ್ಯಾಮರ ಪರಿಶೀಲಿಸಿ ಹಣ ಲಭಿಸದ ಗ್ರಾಹಕರಿಗೆ ನಗದು ನೀಡಿದ್ದು, ಸಯ್ಯದ್ ಸಾಜನ್ ಹಾಗೂ ಇರ್ಷಾದ್ ಇಬ್ಬರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.