ಅಕ್ರಮ ಮದ್ಯ ಸಾಗಾಟ : ಬಸವನಹಳ್ಳಿಯಲ್ಲಿ ಓರ್ವನ ಬಂಧನ

December 9, 2020

ಕುಶಾಲನಗರ ಡಿ. 9 : ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಬಸವನಹಳ್ಳಿ ಬಳಿ ನಡೆದಿದೆ.
ಮೂಲತಃ ನಾಕೂರು ಶಿರಂಗಾಲ ಗ್ರಾಮದ ನಿವಾಸಿ ಕೆ.ಕೆ.ಶ್ರೀನಿವಾಸ (56 ವರ್ಷ) ಬಂಧಿತ ಆರೋಪಿ.
ಈತನ ಬಳಿಯಿದ್ದ 7.2 ಲೀಟರ್ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಆರ್.ಎಂ.ಚೈತ್ರಾ, ಅರಕ್ಷಕರಾದ ಕೆ.ವಿ.ಸುಮತಿ, ಮಹಾಂತೇಶ್ ಸುಣಗಾರ, ಮಹಾದೇವ್ ಹಾಗೂ ಚಾಲಕರಾದ ತ್ಯಾಗರಾಜು, ಜಿತೇಂದ್ರ ಇದ್ದರು.

error: Content is protected !!