ಕೋವಿಡ್ ಮನೆಯಲ್ಲಿ ಪೋಸ್ಟರ್ ಹಚ್ಚಬಾರದು

December 10, 2020

ನವದೆಹಲಿ ಡಿ.10 : ಕೋವಿಡ್-19ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಬಗ್ಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ದೇಶಾದ್ಯಂತ ಕೋವಿಡ್-19 ಸೋಂಕಿತರ ಮನೆಯ ಹೊರಗೆ ಅಧಿಕಾರಿಗಳು ಪೋಸ್ಟರ್ ಗಳು ಮತ್ತು ಸೂಚನಾ ಫಲಕಗಳನ್ನು ಹಚ್ಚಬಾರದು ಎಂದು ಹೇಳಿದೆ.
ವಿಪತ್ತು ನಿರ್ವಹಣೆ ಕಾಯ್ದೆಯಡಿ ಸಂಬಂಧಪಟ್ಟ ಅಧಿಕಾರಿಗಳು ನಿರ್ದಿಷ್ಟ ಆದೇಶಗಳನ್ನು ಹೊರಡಿಸಿದರೆ ಮಾತ್ರ ನಿರ್ದಿಷ್ಟ ಕೇಸ್ ಗಳಲ್ಲಿ ಇಂತಹ ಪೆÇೀಸ್ಟರ್ ಗಳನ್ನು ಹಚ್ಚಬಹುದು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಕೊರೋನಾ ಸೋಂಕಿತರ ಮನೆಯ ಹೊರಗೆ ಪೆÇೀಸ್ಟರ್ ಗಳನ್ನು ಹಚ್ಚುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್-19 ಸೋಂಕಿತರಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ, ಹೀಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಪೆÇೀಸ್ಟರ್ ಗಳು ಹಚ್ಚುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

error: Content is protected !!