ಕಿರುತೆರೆ ನಟಿಯ ನಿಗೂಢ ಸಾವು

10/12/2020

ಚೆನ್ನೈ ಡಿ.10 : ಮತ್ತೊಬ್ಬ ನಟಿ ನಿಗೂಢವಾಗಿ ಮೃತಪಟ್ಟಿರುವ ಸುದ್ದಿ ಬುಧವಾರ ಬೆಳಗ್ಗೆ ಹೊರಬಿದ್ದಿದೆ. ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಹಾಗೂ ನಿರೂಪಕಿ ವಿ ಜೆ ಚಿತ್ರಾ ಅವರ ಮೃತದೇಹ ಚೆನ್ನೈ ಹೊರವಲಯದ ನಜರತ್ ಪೆಟ್ ನಲ್ಲಿರುವ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.
28 ವರ್ಷದ ನಟಿ ಚಿತ್ರಾ ಧಾರಾವಾಹಿಯ ಶೂಟಿಂಗ್ ವೇಳೆ ಹೊಟೇಲ್ ನಲ್ಲಿ ತಂಗಿದ್ದರು, ಇಂದು ಬೆಳಗ್ಗೆ ಅವರ ಮೃತದೇಹ ಸಿಕ್ಕಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚೆನ್ನೈ ಪೆÇಲೀಸರು ಶಂಕಿಸಿದ್ದಾರೆ.
ತಮಿಳಿನ ವಿಜಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಾಂಡಿಯಾನ್ ಸ್ಟೋರ್ಸ್’ ಧಾರಾವಾಹಿಯಲ್ಲಿ ಮುಲ್ಲೈ ಪಾತ್ರದ ಮೂಲಕ ಚಿತ್ರಾ ಜನಪ್ರಿಯರಾಗಿದ್ದರು.
ಇತ್ತೀಚೆಗೆ ಉದ್ಯಮಿ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿತ್ರಾ ಧಾರಾವಾಹಿ ಶೂಟಿಂಗ್ ಮುಗಿಸಿ ಹೊಟೇಲ್ ಗೆ ಮರಳಿದ್ದರು. ಪೆÇಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿದಿದೆ.