ಅನಾಥ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಎಸ್‍ಡಿಪಿಐ ಕಾರ್ಯಕರ್ತರು

December 10, 2020

ಮಡಿಕೇರಿ ಡಿ. 10 : ನಗರದ “ತನಲ್ ವೃದ್ಧಾಶ್ರಮದಲ್ಲಿ” ಸಾವನ್ನಪ್ಪಿದ್ದ ಅನಾಥ ವೃದ್ಧ ಮಹಿಳೆಯ ಅಂತ್ಯಸಂಸ್ಕಾರವನ್ನು ಮಾಡುವ ಮೂಲಕ ನಗರದ ಯುವಕರು ಮಾನವೀಯತೆ ಮೆರೆದಿದ್ದಾರೆ.
ತುಳಸಿ ಬಾಯಿ ಎಂಬ ಮಹಿಳೆಯ ಮೃತದೇಹವನ್ನು ನಗರದ ಚೇನ್ ಗೇಟ್ ಬಳಿಯ ಹಿಂದೂ ರುದ್ರ ಭೂಮಿಯಲ್ಲಿ ಹಿಂದೂ ಧರ್ಮ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದರು.
ಯುವಕರ ತಂಡದಲ್ಲಿ ಎಸ್ ಡಿ ಪಿ ಐ ನಗರಾಧ್ಯಕ್ಷ ಖಲೀಲ್ ಕ್ರಿಯೇಟಿವ್, ಕಾರ್ಯದರ್ಶಿ ಜಂಷೀರ್, ಕಾರ್ಯಕರ್ತರಾದ ಸಾಜಿದ್, ಝಮನ್, ಹಕೀಮ್, ಬ್ಲಡ್ ಡೋನೆರ್ಸ್ ಸಂಘದ ಅಧ್ಯಕ್ಷ ವಿನು ಮತ್ತು ಸಾಮಾಜಿಕ ಕಾರ್ಯಕರ್ತ ಸತೀಶ್ ಇದ್ದರು.

error: Content is protected !!