ಕುಶಾಲನಗರದಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ

10/12/2020

ಮಡಿಕೇರಿ ಡಿ. 10 : ಕುಶಾಲನಗರದ ಹಿಲಾಲ್ ಮಸೀದಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿ ಸಂಘಟನೆ ಎಸ್‍ಕೆಎಸ್‍ಬಿವಿ ವತಿಯಿಂದ ವಿಶ್ವ ಮಾನವ ಹಕ್ಕು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎಸ್‍ಕೆಎಸ್‍ಬಿವಿ ವ್ಯವಸ್ಥಾಪಕ ಉನೈಸ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲ ತಮ್ಲೀಖ್ ದಾರಿಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಸ್ಲಾಂ ಧರ್ಮವೂ ಮಾನವೀಯತೆಗೆ ನೀಡಿದ ಸ್ಥಾನಮಾನವನ್ನು ಹಾಗೂ ಮಾನವ ಹಕ್ಕಿನ ಗೌರವವನ್ನು ವಿವರಿಸಿದರು.
ಎಸ್‍ಕೆಎಸ್‍ಬಿವಿ ಅಧ್ಯಕ್ಷ ಮೂನಿಸ್ ಕನ್ನಡ ಪ್ರಬಂಧ ಹಾಗೂ ಮೀಡಿಯಾ ವಿಂಗ್ ಮುಖ್ಯಸ್ಥ ಮುಹಮ್ಮದ್ ಝಾಹಿದ್ ಇಂಗ್ಲೀಷ್ ಪ್ರಬಂಧ ಮಂಡಿಸಿದರು.
ಎಸ್‍ಕೆಎಸ್‍ಬಿವಿ ಕನ್ವೀನರ್ ಇಬ್ರಾಹಿಂ ಬಾತಿಷಾ ಶಂಸಿ, ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಾಸ್ತಾವಿಕ ಭಾಷಣ ನಡೆಸಿದರು.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷ ಮೂಸಾ, ಕಾರ್ಯದರ್ಶಿಗಳಾದ ರಶೀದ್, ಹುಸೈನ್, ರಝಾಖ್, ಮುಹಮ್ಮದ್ ಸೇರಿದಂತೆ ಆಡಳಿತ ಸಮಿತಿಯ ಪ್ರಮುಖರು ಊರಿನ ಹಿರಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್‍ಕೆಎಸ್‍ಬಿವಿ ಕಾರ್ಯದರ್ಶಿ ಮುಹಮ್ಮದ್ ರಾಫಿ ಸ್ವಾಗತಿಸಿ, ಕೋಶಾಧಿಕಾರಿ ಫಾಝಿಲ್ ವಂದಿಸಿದರು.