ಹಾನಗಲ್ಲು ಗ್ರಾ.ಪಂ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

10/12/2020

ಮಡಿಕೇರಿ ಡಿ. 10 : ಗ್ರಾಮ ಸಂಗ್ರಾಮಕ್ಕೆ ದಿನಗಣನೆ ಆರಂಭಗೊಂಡಿದ್ದು, ಸೋಮವಾರಪೇಟೆ ತಾಲೂಕಿನ 40 ಗ್ರಾ. ಪಂ. ಗಳ 483 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ವಿವಿಧ ಗ್ರಾಮ ಪಂಚಾಯ್ತಿಗಳಿಂದ ಆಯ್ಕೆ ಬಯಸಿ ನೂರಾರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಹಾನಗಲ್ಲು ಗ್ರಾ.ಪಂ 12 ಸ್ಥಾನಗಳಿಗೆ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಹಾನಗಲ್ಲು 1 ನೇ ಕ್ಷೇತ್ರದಿಂದ ಪರಿಶಿಷ್ಟ ಜಾತಿ (ಮ)ಚಂದ್ರಿಕಾ ಧರ್ಮೇಶ್, ಸಾಮಾನ್ಯ ಅಭ್ಯರ್ಥಿಯಾಗಿ ಬಿ.ಕೆ.ಸುದೀಪ್, ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಬಿ.ಈ.ರೇಣುಕಾ ನಾಮಪತ್ರ ಸಲ್ಲಿಸಿದ್ದಾರೆ.
ಹಾನಗಲ್ಲು 2ನೇ ಕ್ಷೇತ್ರದಿಂದ ಹಿಂದುಳಿದ ವರ್ಗ ಆ ಮಹಿಳೆ ಪಿ.ಶಾಂತಕುಮಾರಿ, ಸಾಮಾನ್ಯ ಅಭ್ಯರ್ಥಿಯಾಗಿ ಹೆಚ್.ಆರ್.ರಮೇಶ್,
ಸಾಮಾನ್ಯ ಮಹಿಳಾ ತಿಲಕ ರೈ, ಹಾನಗಲ್ಲು 3ನೇ ಕ್ಷೇತ್ರದಿಂದ ಹಿಂದುಳಿದ ವರ್ಗ ಬಿ. ಎಂ.ಟಿ.ಉಮೇಶ್, ಯಡೂರು ಕ್ಷೇತ್ರದಿಂದ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಯಾಗಿ ಕೆ.ಎಂ. ಲಲಿತಾ, ಸಾಮಾನ್ಯ ಅಭ್ಯರ್ಥಿಯಾಗಿ ರಘು, ಕಲಕಂದೂರು ಕ್ಷೇತ್ರದಿಂದ ಪರಿಶಿಷ್ಟ ಜಾತಿ ಅಭ್ಯರ್ಥಿಯಾಗಿ ಟಿ.ವಿಜಯ್, ಹಿಂದುಳಿದ ವರ್ಗ ಎ ಮಹಿಳಾ ಅಭ್ಯರ್ಥಿಯಾಗಿ ಇಂದಿರಾ ಮೊಣ್ಣಪ್ಪ, ಸಾಮಾನ್ಯ ಅಭ್ಯರ್ಥಿಯಾಗಿ ಕೆ.ಎಸ್.ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ ತಾಲೂಕು ಪಂಚಾಯ್ತಿ ಸದಸ್ಯೆ ತಂಗಮ್ಮ, ಚುನಾವಣಾ ಉಸ್ತುವಾರಿಗಳಾದ ಹರಗ ಉದಯ್, ಎಸ್.ಮಹೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಹಾಜರಿದ್ದರು.