ಗ್ರಾ.ಪಂ ಚುನಾವಣೆ : ಕೆ.ನಿಡುಗಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

10/12/2020

ಮಡಿಕೇರಿ ಡಿ. 10 : ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೊಕ್ಕಲೆರ ಅಯ್ಯಪ್ಪ ಹಾಗೂ ಪಿ.ಸಿ ರಘು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ 100ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಬೆಂಬಲ ಸೂಚಿಸಿ ಸ್ಥಳದಲ್ಲಿ ಹಾಜರಿದ್ದರು. ಕೊಕ್ಕಲೆರ ಅಯ್ಯಪ್ಪ ಅವರು ಈ ಮೊದಲು ಗ್ರಾ.ಪಂ ಚುನಾವಣೆಯಲ್ಲಿ 2 ಬಾರಿ ಗೆಲುವು ಸಾಧಿಸಿದ್ದು, ಇದೀಗ 3ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.