ಮಾಯಮುಡಿ ಶಾಲೆಗೆ ಹೆಚ್ಚುವರಿಯಾಗಿ ನೂತನ ಕಟ್ಟಡ ನಿರ್ಮಾಣ

December 10, 2020

ಮಡಿಕೇರಿ ಡಿ.10 : ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ 4 ತರಗತಿಗಳ ನಿರ್ಮಾಣ ಕಾರ್ಯಕ್ಕೆ ಡಿಸೆಂಬರ್, 11 ರಂದು ಬೆಳಗ್ಗೆ 9.30 ಗಂಟೆಗೆ ಓಸಾಟ್ (ವನ್ ಸ್ಕೂಲ್ ಎಟ್ ಎ ಟೈಮ್) ಸಂಸ್ಥೆಯಿಂದ ಚಾಲನೆ ನೀಡಲಾಗುತ್ತದೆ.
ಕಳೆದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಜಿಲ್ಲೆಯಲ್ಲಿ ಹಲವಾರು ಶಾಲೆಗಳಿಗೂ ಹಾನಿ ಉಂಟಾಗಿದ್ದು, ಮಾಯಮುಡಿ ಶಾಲೆಯ ಕೊಠಡಿಗಳು ಅಪಾಯದ ಹಂತದಲ್ಲಿವೆ. ಆದ್ದರಿಂದ ಈ ಶಾಲೆಗೆ ನೂತನವಾಗಿ 4 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದ್ದು ರೂ. 40 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಸಂಸ್ಥೆಯ ಯೋಜನಾ ಮುಖ್ಯಸ್ಥರಾದ ಸುಬ್ರಮಣ್ಯ ಭಟ್ ಅವರು ತಿಳಿಸಿದ್ದಾರೆ. ಸಂಸ್ಥೆಯ 51 ನೇ ಯೋಜನೆ ಇದಾಗಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.

error: Content is protected !!