ಸಿ.ಎಂ.ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ಮುಖಂಡರನ್ನು ಭೇಟಿ ಮಾಡಿದ ನಿಯೋಗ : ಕಸ್ತೂರಿರಂಗನ್ ವರದಿ ಜಾರಿಗೆ ತರಾತುರಿ ಬೇಡ : ಬೆಳೆಗಾರರ ಒಕ್ಕೂಟ ಮನವಿ

December 10, 2020

ಮಡಿಕೇರಿ.ಡಿ.10 – ಪಶ್ಚಿಮಘಟ್ಟಶ್ರೇಣಿಗಳ ಜನರಿಗೆ ಮಾರಕವಾಗಿ ಪರಿಣಮಿಸಲಿರುವ ಡಾ.ಕಸ್ತೂರಿರಂಗನ್ ವರದಿಯನ್ನು ಕನಾ೯ಟಕದಲ್ಲಿ ಅನುಷ್ಟಾನಗೊಳಿಸಲು ಯಾವುದೇ ತರಾತುರಿ ತೋರದೆ ವರದಿಯಿಂದಾಗುವ ಸಾಧಕ ಬಾಧಕಗಳನ್ನು ಮತ್ತಷ್ಟು ಸಮಗ್ರವಾಗಿ ಪರಿಶೀಲಿಸುವಂತೆ ಕನಾ೯ಟಕ ಬೆಳೆಗಾರರ ಒಕ್ಕೂಟದ ನೇತೖತ್ವದ ನಿಯೋಗ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರಿಗೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಸಕಾ೯ರದಿಂದ ಸಕಾರಾತ್ಮಕ ಸ್ಪಂದನ ದೊರಕಿದೆ.

ಕನಾ೯ಟಕ ಬೆಳೆಗಾರರ ಒಕ್ಕೂಟದ ನಿಯೋಗವು ಬೆಂಗಳೂರಿನ ವಿಧಾನಸೌಧದಲ್ಲಿ ಒಕ್ಕೂಟದ ಅಧ್ಯಕ್ಷ  ಡಾ|| ಹೆಚ್.ಟಿ ಮೋಹನ್ ಕುಮಾರ್    ನೇತೃತ್ವದಲ್ಲಿ ಶಾಸಕರಾದ  ಅರಗ ಜ್ಞಾನೇಂದ್ರ ಹಾಗೂ  ಮಾಜಿ  ಶಾಸಕರಾದ   ಹೆಚ್.ಎಂ.ವಿಶ್ವನಾಥ್   ಸಹಯೋಗದೊಂದಿಗೆ   ಮುಖ್ಯ ಮಂತ್ರಿ ಬಿ,.ಎಸ್.ಯಡಿಯೂರಪ್ಪ  , ವಿಧಾನಸಭಾ ಸಭಾಪತಿಗಳಾದ   ವಿಶ್ವೇಶ್ವರ  ಹೆಗ್ಗಡೆ ಕಾಗೇರಿ  , ಸಚಿವರುಗಳಾದ  ಆರ್.ಅಶೋಕ್ ಮತ್ತು  ಗೋಪಾಲಯ್ಯ, , ಮಾಜಿ ಮುಖ್ಯಮಂತ್ರಿ      ಸಿದ್ದರಾಮಯ್ಯ    ಜಗದೀಶ್ ಶೆಟ್ಟರ್  , ಶಾಸಕರುಗಳಾದ  ಸಿ.ಟಿ ರವಿ,   ಎಂ.ಪಿ. ಅಪ್ಪಚ್ಚುರಂಜನ್.     ಹೆಚ್.ಕೆ.ಕುಮಾರಸ್ವಾಮಿ,   ,  ಟಿ. ಡಿ.ರಾಜೇಗೌಡ  ಕನಾ೯ಟಕ  ಸಕಾ೯ರದ     ಮುಖ್ಯ ಕಾರ್ಯದಶಿ೯ ಟಿ. ಎಂ ವಿಜಯಭಾಸ್ಕರ್  ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ   ಬ್ರಿಜೇಶ್ ಕುಮಾರ್ ಅವರನ್ನು ಭೇಟಿ ಮಾಡಿತು.

ಡಾ|| ಕಸ್ತೂರಿರಂಗನ್ ವರದಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸದೆ ಈ  ವರದಿಯ ಸಾಧಕ-ಭಾದಕಗಳನ್ನು ತಿಳಿದುಕೊಂಡು  ಜನಪ್ರತಿನಿಧಿಗಳು, ಕಾಫಿ ಬೆಳೆಗಾರರು, ಬೆಳೆಗಾರ ಸಂಘಟನೆಯ ಮುಖಂಡರು ಹಾಗೂ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನೊಳಗೊಂಡ ಸಭೆಗಳನ್ನು ನಡೆಸಿ ಪ್ರತಿಯೊಂದು ಗ್ರಾಮ ವ್ಯಾಪ್ತಿಯಲ್ಲಿ ಉಲ್ಲೇಖವಾಗಿರುವ ಪ್ರದೇಶಗಳನ್ನು ಖುದ್ದಾಗಿ ಪರಿಶೀಲಿಸಿ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಬೇಕು.

ಡಾ||ಕಸ್ತೂರಿರಂಗನ್ ವರದಿ ಅನುಷ್ಟಾನಕ್ಕೆ ಸ್ಥಳೀಯ ಕೇರಳ ರಾಜ್ಯ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಿಸಬೇಕು ಹಾಗೂ ರೈತರ ಕೃಷಿ ಜಮೀನುಗಳನ್ನು ಹಾಗೂ ವಾಸಸ್ಥಳಗಳನ್ನು ಸೂಕ್ಷ್ಮ ಪರಿಸರ ಪ್ರದೇಶಗಳ ಪಟ್ಟಿಯಿಂದ ಹೊರಗಿಡಬೇಕೆಂದು ಈ ಸಂದಭ೯  ಬೇಡಿಕೆ ಮುಂದಿಡಲಾಯಿತು.

ಕಸ್ತೂರಿರಂಗನ್ ವರದಿಯ ಬಗ್ಗೆ   ಶಾಸಕ    ಅರಗ  ಜ್ಞಾನೇಂದ್ರ    ಸದನದಲ್ಲಿ   ಧ್ವನಿ  ಎತ್ತಿದ್ದು,  ರಾಜ್ಯದ  ಗಮನ ಸೆಳೆದಿರುವುದು   ಕನಾ೯ಟಕ  ಬೆಳೆಗಾರರ ಒಕ್ಕೂಟದ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಂತಾಗಿದೆ.  

ವಿರಾಜಪೇಟೆ ಶಾಸಕ  ಕೆ.ಜಿ.ಬೋಪಯ್ಯ, ಕಾರ್ಕಳದ  ಶಾಸಕ   ಸುನೀಲ್ ಕುಮಾರ್ , ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಕೂಡ,  ಕಸ್ತೂರಿರಂಗನ್ ವರದಿಯ ಮಾಪಾ೯ಡಿಗಾಗಿ   ಸಕಾ೯ರವನ್ನು ಒತ್ತಾಯಿಸಿದ್ದಾರೆ.

 ಮುಖ್ಯಮಂತ್ರಿಗಳು   ಹಾಗೂ  ಸಚಿವರು  ಕನಾ೯ಟಕ ಬೆಳೆಗಾರರ ಒಕ್ಕೂಟದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

 ಕಸ್ತೂರಿರಂಗನ್ ವರದಿ ಸಾಧಕ-ಭಾದಕಗಳನ್ನು ಪರಿಶೀಲಿಸಿ ವರದಿಯಲ್ಲಿ ಜನ ಸಾಮಾನ್ಯರಿಗೆ ಹಾಗೂ ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ  ಮಾಪಾ೯ಡುಗೊಳಿಸಿ  ಕೇರಳ ಸಕಾ೯ರ   ಹೊರತಂದ  ವರದಿಯ  ಪರಿಷ್ಕೃತ  ಪ್ರತಿಯನ್ನು   ಮುಖ್ಯಮಂತ್ರಿಯವರಿಗೆ, ಸಕಾ೯ರದ  ಮುಖ್ಯಕಾರ್ಯದಶಿ೯ಗೆ ಸಲ್ಲಿಸಲಾಗಿದೆ.

ಈ ನಿಯೋಗದಲ್ಲಿ  ಕನಾ೯ಟಕ  ಬೆಳೆಗಾರರ  ಒಕ್ಕೂಟದ   ಅಧ್ಯಕ್ಷ   ಡಾ|| ಹೆಚ್.ಟಿ.ಮೋಹನ್ ಕುಮಾರ್, ಉಪಾಧ್ಯಕ್ಷ   ನಂದಾಬೆಳ್ಳಿಯಪ್ಪ, ಸಂಘಟನಾ ಕಾರ್ಯದಶಿ೯  ಕೆ .ಕೆ.ವಿಶ್ವನಾಥ್, ಖಜಾಂಚಿ ಎಂ.ಬಿ.ರಾಜೀವ್, ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ  ರಂಗನಾಥ್, ಸಹ್ಯಾದ್ರಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ಸುಂದರೇಶ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ  ನಿದೇ೯ಶಕ ಎಂ.ವಿ.ರತ್ನಾಕರ್ ಹಾಜರಿದ್ದರು ಎಂದು ಒಕ್ಕೂಟದ ಪ್ರಧಾನ ಕಾಯ೯ದಶಿ೯ ಕೆ.ಬಿ.ಕೖಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!