ಕಾಫಿ ಸಮಸ್ಯೆ : ಶಾಶ್ವತ ಪರಿಹಾರಕ್ಕೆ ಮನವಿ

10/12/2020

ಮಡಿಕೇರಿ ಡಿ.10 – ಕನಾ೯ಟಕ  ಬೆಳೆಗಾರರ ಒಕ್ಕೂಟದ  ಪ್ರಮುಖರು    ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಜಗದೀಶ್ ಅವರನ್ನು ಬೆಂಗಳೂರಿನ ಕಾಫಿ ಮಂಡಳಿಯ ಪ್ರಧಾನ ಕಛೇರಿಯಲ್ಲಿ ಭೇಟಿಮಾಡಿ ಕಾಫಿಬೆಳೆಗಾರರ ಪ್ರಮುಖ ಬೇಡಿಕೆಗಳ ಬಗ್ಗೆ ಚಚಿ೯ಸಿದರು.  

 ಕೇಂದ್ರ ಸಕಾ೯ರದ ಮೇಲೆ  ಒತ್ತಡ ತಂದು ಕಾಫಿ ಉದ್ಯಮದ  ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ  ಕಾಫಿ ಮಂಡಳಿಯ ಕಾರ್ಯದಶಿ೯ಯ  ಗಮನಸೆಳೆಯಲಾಯಿತು.

ಬಹುಮುಖ್ಯವಾಗಿ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ತೀವ್ರವಾದ ಆಥಿ೯ಕ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಕಾಫಿ ಮಂಡಳಿಯ ಶಿಫಾರಸ್ಸಿನ ಆಧಾರದಲ್ಲಿ ಆಥಿ೯ಕ ಪುನಶ್ಚೇತನ ದೊರಕಿಸಿಕೊಡುವಂತೆ ಒಕ್ಕೂಟದಿಂದ   ಮನವಿ ಸಲ್ಲಿಸಲಾಯಿತು.

ಮುಂಬರುವ ಪಂಚವಾಷಿ೯ಕ ಯೋಜನೆಯಲ್ಲಿ ಕಾಫಿ ಕೊಯ್ಲು ಪೂರ್ವದ ಚಟುವಟಿಕೆಗಳಿಗೆ ಅವಶ್ಯಕವಾಗಿ ಬೇಕಾದ ಯಂತ್ರೋಪಕರಣಗಳನ್ನು ಪರಿಚಯಿಸಿ, ಸ್ಥಳೀಯ ಸಂಘಟನೆಗಳ ಮೂಲಕ ಬೆಳೆಗಾರರಿಗೆ ಸೇವೆ ನೀಡುವ ಮಹತ್ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ.ಜಗದೀಶ್ ಭರವಸೆ ನೀಡಿದರು. ಕನಾ೯ಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ        ಡಾ.ಹೆಚ್.ಟಿ.ಮೋಹನ್ ಕುಮಾರ್, ಪ್ರಧಾನ ಕಾಯ೯ದಶಿ೯ ಕೆ.ಬಿ.ಕೃಷ್ಣಪ್ಪ,   ಹಾಜರಿದ್ದರು.