ಕಳ್ಳತನ ಪ್ರಕರಣ : ವಿರಾಜಪೇಟೆ ಪೊಲೀಸರಿಂದ ಪುತ್ತೂರು ಮೂಲದ ಇಬ್ಬರ ಬಂಧನ

December 10, 2020

ಮಡಿಕೇರಿ ಡಿ.10 : ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಪರಿಕರಗಳನ್ನು ಕಳವು ಮಾಡಿದ ಆರೋಪದಡಿ ಇಬ್ಬರನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಆಲಂಗಾರ್ ಗ್ರಾಮದ ನಿವಾಸಿ ಉಮೇಶ್ ಪೂಜಾರಿ(42) ರಾಮಪುಂಜ ಗ್ರಾಮದ ನಿವಾಸಿ ರವಿ ಪೂಜಾರಿ (28) ಬಂಧಿತ ಆರೋಪಿಗಳು.
ಕೊಡಗಿನ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಆರೋಪಿಗಳು ಅಮ್ಮತ್ತಿ ಕಾವಾಡಿ ಸೇರಿದಂತೆ ಕಟ್ಟಡ ನಿರ್ಮಾಣದ ಇತರೆಡೆ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬಹಿರಂಗಗೊಂಡಿದೆ. 2019 ಮತ್ತು 2020 ರಲ್ಲಿ ಕಳ್ಳತನ ಮಾಡಿದ 162 ಕಬ್ಬಿಣದ ಶೀಟ್‍ಗಳು, 19 ಫ್ಲೈವುಡ್ ಶೀಟ್ ಗಳು, ಒಂದು ಜನರೇಟರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು 4.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಸೂಚನೆಯಂತೆ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಜಯಕುಮಾರ್ ಅವರ ನಿರ್ದೇಶನದಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕÀ ಕ್ಯಾತೆಗೌಡ ಅವರ ನೇತೃತ್ವದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ಪಿ.ಎಸ್.ಐ. ಬೋಜಪ್ಪ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಪಿ.ಎಸ್.ಐ. ಸಿದ್ದಲಿಂಗ ಬಿ. ಬಾನಸೆ ಮತ್ತು ಸಿಬ್ಬಂದಿಗಳಾದ ಮುಸ್ತಫಾ, ಗಿರೀಶ್, ಚಂದ್ರಶೇಖರ್, ಲೋಕೇಶ್, ರಾಮಪ್ಪ, ಸಂತೋಷ್, ಮಧು ಹಾಗೂ ಚಾಲಕ ಪೂವಯ್ಯ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!