ಗೋಹತ್ಯೆ ನಿಷೇಧ ಕುರಿತು ಸ್ಪಷ್ಟನೆ

December 11, 2020

ಬೆಂಗಳೂರು ಡಿ.11 : ಗೋಹತ್ಯೆ ನಿಷೇಧ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸಬೇಕಾಗಿತ್ತು. ವಿಧಾನಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಅಲ್ಲಿ ಈ ಮಸೂದೆಯನ್ನು ಮಂಡಿಸಬೇಕಾಗಿದ್ದುದರಿಂದ ವಿಧಾನಸಭೆಯಲ್ಲಿ ಸ್ವಲ್ಪ ತರಾತುರಿಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಅದನ್ನು ಬಿಟ್ಟು ಮತ್ತೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯ ಕೊನೆಯ ದಿನದ ಕಲಾಪದ ಆರಂಭದಲ್ಲಿ ಮಾತನಾಡಿದ ಅವರು, ಪರಿಷತ್ ಸಲಹಾ ಸಮಿತಿ ಸಭೆಗೆ ಹೋದಾಗ ವಿರೋಧ ಪಕ್ಷದ ನಾಯಕರು ಮಾಡಿದ ಹಠ ನೋಡಿದಾಗ ಯಾವುದೇ ಮಸೂದೆ ಅಂಗೀಕಾರವಾಗುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಆದಷ್ಟು ಬೇಗ ಅಂಗೀಕಾರ ಮಾಡುವ ಅನಿವಾರ್ಯವಿತ್ತು. ವಿಪಕ್ಷ ನಾಯಕರಿಗೆ ಅವಮಾನ ಮಾಡುವ ದುರುದ್ದೇಶವಿರಲಿಲ್ಲ. ಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಆತಂಕವಿದ್ದುದರಿಂದ ವಿಧಾನಸಭೆಯಲ್ಲಿ ಬೇಗ ಮಂಡಿಸವಂತೆ ಸ್ಪೀಕರ್ ಗೆ ಮನವಿ ಮಾಡಿದ್ದೇವು ಎಂದು ಸ್ಪಷ್ಟಪಡಿಸಿದರು.

error: Content is protected !!