ಆರ್ಥಿಕ ವರ್ಷದ ಕುಸಿತ ಶೇ.8 ಕ್ಕೆ ಇಳಿಕೆ
December 11, 2020

ನವದೆಹಲಿ ಡಿ.11 : ಭಾರತದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತಲೂ ತ್ವರಿತಗತಿಯಲ್ಲಿ ಆಗಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) 2020-21 ರ ಆರ್ಥಿಕ ವರ್ಷದ ಕುಸಿತವನ್ನು ಶೇ.9 ರಿಂದ ಶೇ.8 ಕ್ಕೆ ಇಳಿಕೆ ಮಾಡಿದೆ.
ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಏಷ್ಯನ್ ಡೆವಲ್ಪ್ಮೆಂಟ್ ಔಟ್ ಲುಕ್ ನಲ್ಲಿ ಗಮನಿಸಲಾಗಿದ್ದು, ಎರಡನೇ ತ್ರೈಮಾಸಿಕದ ಕುಸಿತ ಶೇ.7.5 ರಷ್ಟಿದ್ದು, ನಿರೀಕ್ಷೆಗೂ ವೇಗವಾಗಿ ಚೇತರಿಕೆ ಕಂಡಿದೆ ಎಂದು ಹೇಳಿದೆ.
ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.23.9 ರಷ್ಟು ಕುಸಿತ ದಾಖಲಾಗಿತ್ತು.
2020 ರ ಆರ್ಥಿಕ ವರ್ಷದ ಜಿಡಿಪಿ ಮುನ್ನೋಟವನ್ನು ಶೇ.9.0ಯಿಂದ ಶೇ.8.0 ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್2 ನಲ್ಲಿ ಜಿಡಿಪಿ ಕಳೆದ ವರ್ಷದ ಗಾತ್ರಕ್ಕೇ ಮರಳುವ ಸಾಧ್ಯತೆ ಇದೆ. 2021 ರ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.8.0 ರಷ್ಟಕ್ಕೆ ಅಂದಾಜಿಸಲಾಗಿದೆ ಎಂದು ಎಡಿಬಿ ತಿಳಿಸಿದೆ.
