ಮಹಿಳಾ ಕುಸ್ತಿಪಟುವಿಂದ ಗಂಭೀರ ಆರೋಪ

December 11, 2020

ನವದೆಹಲಿ ಡಿ.11 : ಅರೆಸೇನಾಪಡೆಯ ಮುಖ್ಯ ಕ್ರೀಡಾ ಅಧಿಕಾರಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ಹಾಗೂ ಕೋಚ್ ಸುರ್ಜಿತ್ ಸಿಂಗ್ ಅವರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕೇಂದ್ರ ಮೀಸಲು ಪೆÇಲೀಸ್ ಪಡೆ(ಸಿಆರ್ ಪಿಎಫ್)ಯ 30 ವರ್ಷದ ಮಹಿಳಾ ಕುಸ್ತಿಪಟು ಗಂಭೀರ ಆರೋಪ ಮಾಡಿದ್ದಾರೆ.
ಮಹಿಳಾ ಕುಸ್ತಿಪಟು ದೂರಿನ ಆಧಾರದ ಮೇಲೆ ದೆಹಲಿ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದು, ಖಜನ್ ಸಿಂಗ್ ಮತ್ತು ಸುರ್ಜಿತ್ ಸಿಂಗ್ ಅವರು ಬಲವಂತವಾಗಿ ಸೆಕ್ಸ್ ದಂಧೆ ನಡೆಸುತ್ತಿದ್ದಾರೆ ಮತ್ತು ಅವರಿಗೆ ಹಲವು ಸಾಥ್ ನೀಡುತ್ತಿದ್ದಾರೆ ಎಂದು ಸಹಚರರು” ಇದ್ದಾರೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
1986ರ ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಖಜನ್ ಸಿಂಗ್ ಅವರು ಸಿಆರ್ ಪಿಎಫ್ ನಲ್ಲಿ ಡಿಐಜಿ ಶ್ರೇಣಿಯ ಅಧಿಕಾರಿಯಾಗಿದ್ದು, ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
“ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು. ನನ್ನ ಇಮೇಜ್ ಅನ್ನು ಹಾಳುಮಾಡಲು ಈ ರೀತಿ ಆರೋಪ ಮಾಡಲಾಗಿದೆ” ಎಂದು ಖಜನ್ ಹೇಳಿದ್ದಾರೆ.

error: Content is protected !!