ನೀಟ್ ಪರೀಕ್ಷೆ ರದ್ದು ಪಡಿಸಲ್ಲ

December 11, 2020

ನವದೆಹಲಿ ಡಿ.11 : ನೀಟ್ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೆÇಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.
ನೀಟ್ ಪರೀಕ್ಷೆ ರದ್ದು ಪಡಿಸಲಾಗುತ್ತದೆ ಎಂಬುದು ಕೇವಲ ಸುಳ್ಳು ವದಂತಿ ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ರದ್ದಾಗುವುದಿಲ್ಲ ಎಂದು ಸಚಿವರು ಹೇಳಿದರು. ದೆಹಲಿಯಲ್ಲಿ ತಜ್ಞರೊಂದಿಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೊರೋನ ಸಂಕಷ್ಟದಿಂದ ಮುಂದೂಡಿದ್ದ ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದಿನ ವರ್ಷ 2021ರಲ್ಲಿ ನಡೆಸಲಾಗುವುದು ಎಂದ ಸಚಿವರು, ವಿದ್ಯಾರ್ಥಿಗಳು ಯಾವುದೇ ಗಲಿಬಿಲಿ, ಅತಂತಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು .
ಪರೀಕ್ಷಾ ದಿನಾಂಕ ಘೋಷಣೆಗೂ ಮೊದಲು ಪರೀಕ್ಷಾ ಸಿದ್ಧತೆಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಸಚಿವರು ಅಭಯ ನೀಡಿದರು.

error: Content is protected !!