ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

December 11, 2020

ಮಡಿಕೇರಿ ಡಿ.11 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು 2020 ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಿದೆ.
ಅರೆಭಾಷೆ ಸಾಹಿತ್ಯ, ಅರೆಭಾಷೆ ಕಲೆ, ಅರೆಭಾಷೆ ಜಾನಪದ, ಅರೆಭಾಷೆ ಸಂಸ್ಕøತಿ, ಅರೆಭಾಷೆ ಮತ್ತು ಅಧ್ಯಯನ ಮುಂತಾದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು 2020 ರ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ 3 ಜನ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
ಅರ್ಜಿಗಳನ್ನು ಸ್ವತ: ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸುಮಾಡಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಹರಾಗಿರುವವರ ಕುರಿತು ಹೆಚ್ಚಿನ ಅಥವಾ ವಿಶೇಷ ಮಾಹಿತಿಗಳಿದ್ದಲ್ಲಿ ಅದನ್ನು ಅಕಾಡೆಮಿಗೆ ಒದಗಿಸಬಹುದು. ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಜೊತೆ ಎಲ್ಲಾ ಮಾಹಿತಿಗಳನ್ನು ಅಕಾಡೆಮಿಯ ನಿಗದಿತ ಅರ್ಜಿ ನಮೂನೆಯಲ್ಲಿಯೇ ಕಳುಹಿಸಬೇಕು. ಇದಕ್ಕೆ ಸಂಬಂಧಿಸಿದ ನಿಗದಿತ ಅರ್ಜಿ ನಮೂನೆಯನ್ನು ಅಕಾಡೆಮಿಯ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಇತ್ತೀಚಿನ ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಯೊಂದಿಗೆ ಕೊನೆ ದಿನಾಂಕದ ಮೊದಲು ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು. ಹಾಗೆಯೇ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ. 2020ರ ಜನವರಿ, 01 ರಿಂದ 2020ರ ಡಿಸೆಂಬರ್, 31 ರ ಅವಧಿಯ ಮಧ್ಯೆ ಪ್ರಕಟಗೊಂಡ ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಪರಿಗಣಿಸಲು ಅವಕಾಶವಿದೆ. ಅರೆಭಾಷೆ ಕವನ ಸಂಕಲನ, ಅರೆಭಾಷೆ ಕಥಾ ಸಂಕಲನ, ಅರೆಭಾಷೆ ಕಾದಂಬರಿ, ಅರೆಭಾಷೆ ನಾಟಕ, ಅರೆಭಾಷೆ ಲಲಿತ ಪ್ರಬಂಧ, ಅರೆಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಅರೆಭಾಷೆಯಿಂದ ಇತರೆ ಭಾಷೆಗೆ ಅಥವಾ ಅನ್ಯ ಭಾಷೆಯಿಂದ ಅರೆಭಾಷೆಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿದೆ. ಹೆಚ್ಚು ಜನಮನ್ನಣೆ ಗಳಿಸಿದ ಪುಸ್ತಕದ ಮೂರು ಪ್ರಕಾರಗಳನ್ನು ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ-2020” ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಅರೆಭಾಷೆ ಅಕಾಡೆಮಿ ಪುಸ್ತಕ ಬಹುಮಾನ 2020” ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ-ಕೃಪ ಕಟ್ಟಡ, 1ನೇ ಮಹಡಿ,ರಾಜಾಸೀಟ್ ರಸ್ತೆ, ಮಡಿಕೇರಿ-571 201. ಈ ವಿಳಾಸಕ್ಕೆ ಕಳುಹಿಸಿಕೊಡುವುದು. ಡಿಸೆಂಬರ್, 31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ 6362522677 ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

error: Content is protected !!