ಐವರು ಪಾಕ್ ಸೈನಿಕರು ಬಲಿ

12/12/2020

ಶ್ರೀನಗರ ಡಿ.12 : ಪಾಕಿಸ್ತಾನ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿಗೆ ಐವರು ಪಾಕ್ ಸೈನಿಕರು ಬಲಿಯಾಗಿದ್ದಾರೆ.
ಪಾಕ್ ಸೈನಿಕರು ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಅಪಾರ ಪ್ರಮಾಣದಲ್ಲಿ ಶೆಲ್ಲಿಂಗ್ ದಾಳಿ ನಡೆಸಿದ್ದರು. ಈ ವೇಳೆ ಪಾಕ್ ನ ಐವರು ಸೈನಿಕರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪಾಕ್ ಸೈನಿಕರು ಮಂಕೋಟೆ ಸೆಕ್ಟರ್ ನಲ್ಲಿ ಸಾರ್ವಜನಿಕ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿದ್ದರು. ಭಾರತೀಯ ಸೇನೆ ಪ್ರತಿ ದಾಳಿ ನಡೆಸಿ ಪಾಕ್ ನ ಹಲವು ಬಂಕರ್ ಗಳನ್ನು ನಾಶ ಮಾಡಿದೆ.