ಕೂಡಿಗೆ ಪಂಚಾಯಿತಿ ಸದಸ್ಯರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಅವಿರೋಧ ಆಯ್ಕೆ

December 12, 2020

ಮಡಿಕೇರಿ ಡಿ. 12 : ಕೂಡಿಗೆ ಪಂಚಾಯಿತಿಯ ಸದಸ್ಯರಾಗಿ 2ನೇ ವಾರ್ಡ್‍ನಿಂದ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಗಣೇಶ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್‍ಖಾನ್, ಕಾರ್ಯದರ್ಶಿ ಎನ್. ಸಿ ಸುನೀಲ್, ಕುಶಾಲನಗರ ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಕರೀಂ, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಬ್ಬಿ, ಜಿಲ್ಲಾ ಎಸ್.ಸಿ. ಘಟಕ ಅಧ್ಯಕ್ಷ ರಾಮಚಂದ್ರ, ಸುಂಠಿಕೊಪ್ಪ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬೀರ್ ಹಾಗೂ ಪ್ರಮುಖರಾದ ರಾಜು ಕೂಡಿಗೆ, ರಾಜು ಗೌಡ್ರು, ಜಾಶೀರ್ ಇದ್ದರು.

error: Content is protected !!