ಮೊದಲ ಹಂತದ ಚುನಾವಣೆ : ಕೊಡಗಿನ 66 ಗ್ರಾ.ಪಂ ಗಳಿಗೆ 1,290 ನಾಮಪತ್ರ ಸಲ್ಲಿಕೆ

December 12, 2020

ಮಡಿಕೇರಿ ಡಿ.12 : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಒಟ್ಟು 66 ಗ್ರಾ.ಪಂ ಗಳ 778 ಸ್ಥಾನಗಳಿಗೆ ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಒಟ್ಟು 1,290 ನಾಮಪತ್ರಗಳು ಸಲ್ಲಿಕೆಯಾಗಿದೆ.
ಮಡಿಕೇರಿ ತಾಲ್ಲೂಕಿನ 26 ಗ್ರಾ.ಪಂ.ಗಳಲ್ಲಿನ 287 ಸ್ಥಾನಗಳಿಗೆ ಒಟ್ಟು 428 ನಾಮಪತ್ರಗಳು ಸಲ್ಲಿಕೆಯಾಗಿದೆ. 7 ಸ್ಥಾನಗಳು ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿದೆ.
ಸೋಮವಾರಪೇಟೆ ತಾಲ್ಲೂಕಿನ 40 ಗ್ರಾ.ಪಂ.ಗಳ 483 ಸ್ಥಾನಗಳಿಗೆ 862 ನಾಮಪತ್ರಗಳು ಸಲ್ಲಿಕೆಯಾಗಿದೆ. 2ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಗ್ರಾ.ಪಂ.ಗಳಿಗೆ ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ ಅನುಸೂಚಿತ ಜಾತಿ ಮೀಸಲಾತಿಯಡಿ 166 ನಾಮಪತ್ರಗಳು, ಪರಿಶಿಷ್ಟ ಪಂಗಡದ 88, ಹಿಂದುಳಿದ ವರ್ಗ(ಆ) 207, ಹಿಂದಳಿದ ವರ್ಗ (ಬಿ) 57, ಸಾಮಾನ್ಯ ಮೀಸಲಾತಿಯಡಿ 772 ನಾಮಪತ್ರಗಳು ಸಲ್ಲಿಕೆಯಾಗಿದೆ. ಮೊದಲ ಹಂತದ ಚುನಾವಣೆ ಡಿ.22 ರಂದು ನಡೆಯಲಿದೆ.
ದ್ವಿತೀಯ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿ.11 ರಿಂದ ಆರಂಭವಾಗಿದ್ದು, ವಿರಾಜಪೇಟೆ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ 434 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ಒಟ್ಟು 28 ನಾಮಪತ್ರಗಳಷ್ಟೆ ಸಲ್ಲಿಕೆಯಾಗಿದೆ. ನಾಮ ಪತ್ರ ಸಲಿಕೆಗೆ ಡಿ.17 ಕೊನೆಯ ದಿನಾಂಕವಾಗಿದೆ.

error: Content is protected !!