ಮಡಿಕೇರಿಯಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ : ಜನೌಷಧಿ ಕೇಂದ್ರಗಳು ಸಮಾಜಸೇವೆಯ ಭಾಗ : ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ

December 13, 2020

ಮಡಿಕೇರಿ ಡಿ.13 : ಜನೌಷಧಿ ಕೇಂದ್ರಗಳು ಲಾಭಗಳಿಕೆಯ ಮಳಿಗೆಗಳಲ್ಲ, ಬದಲಾಗಿ ಬಡವರ್ಗದ ಔಷಧಿಯ ಬೇಡಿಕೆಗಳನ್ನು ಕಡಿಮೆ ದರಕ್ಕೆ ಮುಟ್ಟಿಸುವ ಸಮಾಜಸೇವೆಯ ಭಾಗವೆಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಪ್ರಧಾನ ಅಂಚೆ ಕಛೇರಿ ಬಳಿ ಕೆ.ಕೆ.ದಿನೇಶ್ ಕುಮಾರ್ ಅವರ ಮೂಲಕ ನೂತನವಾಗಿ ಆರಂಭಗೊಂಡಿರುವ ‘ಪ್ರಧಾನ ಮಂತ್ರಿಗಳ ಭಾರತೀಯ ಜನೌಷಧಿ’ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ವಿವಿಧೆಡೆ ಜನೌಷಧಿ ಕೇಂದ್ರಗಳು ಈಗಾಗಲೆ ಆರಂಭವಾಗಿದ್ದು, ಇದರ ಪ್ರಯೋಜನವನ್ನು ಬಡಜನತೆ ಪಡೆಯಬೇಕೆಂದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಬಡವರ್ಗದ ಮಂದಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸಿಕೊಡಬೇಕೆನ್ನುವ ಪ್ರಧಾನಿ ನರೇಂದ್ರಮೋದಿ ಅವರ ಚಿಂತನೆ ‘ಜನೌಷಧಿ’ ಕೇಂದ್ರಗಳ ಮೂಲಕ ಸಾಕಾರಗೊಂಡಿದೆ ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳಿಂದ ಬಡಜನತೆಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಇಂತಹ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಗಳು ಯೋಗ್ಯವಾಗಿಲ್ಲ ಎಂದು ಕೆಲವು ವೈದ್ಯರು ಖಾಸಗಿ ಔಷಧಿಯಂಗಡಿಗಳಿಂದ ‘ಪರ್ಸೆಂಟೇಜ್’ ಪಡೆಯಲು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಜನೌಷಧಿ ಕೇಂದ್ರಗಳಿಂದ ಬಡವರ್ಗದ ಮಂದಿಗೆ ಕೆಲವು ಔಷಧಿಗಳು ಶೇ.70 ರಿಂದ 80 ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತದೆ ಎಂದು ತಿಳಿಸಿದ ಅವರು ಸಾಕಷ್ಟು ಸಮಯದಿಂದ ಮಡಿಕೇರಿಯಲ್ಲಿ ಜನೌಷಧಿ ಕೇಂದ್ರ ಬೇಕೆನ್ನುವ ಜನರ ಬೇಡಿಕೆ ಇದೀಗ ಸಾಕಾರವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್‍ಸುಬ್ರಮಣಿ ಮಾತನಾಡಿ, ಸಮಾಜದ ಕೆಳ ಸ್ತರದಲ್ಲಿರುವ ದುರ್ಬಲ ವರ್ಗದ ಆರೋಗ್ಯ ಸಮಸ್ಯೆಗಳಿಗೆ ನೆರವು ನೀಡುವ ಪ್ರಧಾನಿ ಮೋದಿ ಅವರ ಜನೌಷಧಿ ಯೋಜನೆಗೆ ಹಿಂದಿನ ಕೇಂದ್ರ್ರ ಸಚಿವರಾಗಿದ್ದ ದಿ.ಅನಂತ ಕುಮಾರ್ ಅವರು ಕೈಜೋಡಿಸಿದ್ದನು ಸ್ಮರಿಸಿದರು.
ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್ ಮಾತನಾಡಿ, ಜನೌಷಧಿ ಕೇಂದ್ರಕ್ಕೆ ಬರುವವರು ಬಹುತೇಕ ಬಡವರ್ಗದ ಮಂದಿಯೇ ಆಗಿದ್ದು, ಈ ಹಿನ್ನೆಲೆಯಲ್ಲಿ ಜನೌಷಧಿ ಕೇಂದ್ರಗಳನ್ನು ನಡೆಸುವುದು ಕೇವಲ ವೃತ್ತಿ, ಉದ್ಯಮವÀಲ್ಲ. ಬದಲಾಗಿ ಜನಸೇವೆಯೇ ಆಗಿದೆಯೆಂದು ತಿಳಿಸಿದರು.
ವೈದ್ಯ ಹಾಗೂ ಪ್ರಜಾಸತ್ಯ ಪತ್ರಿಕೆಯ ಸಂಪಾದಕ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ, ಜನೌಷಧಿ ಯೋಜನೆಯಡಿ 2014 ರಿಂದ 2020 ರ ನಡುವಿನ ಅವಧಿಯಲ್ಲಿ ರಾಷ್ಟ್ರವ್ಯಾಪಿ 6 ಸಾವಿರ ಜನೌಷಧಿ ಕೇಂದ್ರಗಳು ಆರಂಭಗೊಂಡು ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಮಧ್ಯಮ ವರ್ಗದ ಮಂದಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಬಂದ ಇತರೆ ಯಾವುದೇ ಸರ್ಕಾರಗಳು ಇಂತಹ ಒಂದು ಪ್ರಯತ್ನ ಮಾಡಿರಲಿಲ್ಲವೆಂದರು. ಕೊಡಗಿನ ಪ್ರತಿ ಹೋಬಳಿಗಳಲ್ಲಿ ಜನೌಷಧಿ ಕೇಂದ್ರಗಳು ಆರಂಭಗೊಳ್ಳಬೇಕೆಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕರು ಹಾಗೂ ಕರ್ನಾಟಕ ವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಚಕ್ಕೇರ ಮನು ಕಾವೇರಪ್ಪ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷÀ ರಮೇಶ್ ಹೊಳ್ಳ ಮತ್ತಿತರರು ಪಾಲ್ಗೊಂಡಿದ್ದರು. ಕೆ.ಕೆ.ಮಹೇಶ್ ಕುಮಾರ್ ಸ್ವಾಗತಿಸಿ, ಕೆ.ಕೆ.ದಿನೇಶ್ ಕುಮಾರ್ ವಂದಿಸಿದರು.

error: Content is protected !!