ಸೋಮವಾರಪೇಟೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ : 80.65ಲಕ್ಷ ಲಾಭ : ಸದಸ್ಯರಿಗೆ ಶೇ. 16 ರಷ್ಟು ಡಿವಿಡೆಂಟ್ ಘೋಷಣೆ

December 14, 2020

ಮಡಿಕೇರಿ ಡಿ. 14 : ಸೋಮವಾರಪೇಟೆ ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಚನ್ನಬಸಪ್ಪ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಚ್.ಕೆ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಮಾತನಾಡಿದ ಮಾದಪ್ಪ, ಸಂಘ ಪ್ರಾರಂಭವಾಗಿ 100 ವರ್ಷಗಳನ್ನು ಪೂರೈಸಿದ್ದು, ಪ್ರಗತಿಪಥದತ್ತ ಸಾಗುತ್ತಿದೆ. 2019-20ನೇ ಸಾಲಿಗೆ 80.65ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 16 ಲಾಭಾಂಶ ನೀಡಲಾಗುವುದು ಎಂದು ಹೇಳಿದರು.
ಸದಸ್ಯರಿಗೆ ಕೆಪಿಸಿ ಸಾಲವನ್ನು ರೂ.75 ಸಾವಿರದಿಂದ 95 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಾಲಿ ಜಾಮೀನು ಸಾಲ ವಿಮಾ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ 9 ಸದಸ್ಯರುಗಳು ಮೃತರಾಗಿದ್ದು, ಅವರು ಪಡೆದಿದ್ದ ರೂ 3,11,000 ಸಾಲವನ್ನು ಚುಕ್ತ ಮಾಡಲಾಗಿದೆ. 16 ಸದಸ್ಯರು ಮೃತರಾಗಿದ್ದು, ಅವರ ಕುಟುಂಬಕ್ಕೆ ರೂ 25 ಸಾವಿರ ಮರಣ ನಿಧಿಯನ್ನು ನೀಡಲಾಗಿದೆ. ಸರಕಾರದÀ ನಿರ್ದೇಶನದಂತೆ ರೈತರಿಗೆ ಹೈನುಗಾರಿಕೆ, ಮೀನು ಸಾಕಾಣಿಕೆ ಕೃಷಿ ಸಾಲ ಒಳಗೊಂಡಂತೆ ರೂ. 3 ಲಕ್ಷದ ವರೆಗೆ ನೀಡಲಾಗುತ್ತಿದ್ದು, ಸದಸ್ಯರು ಬಳಸಿಕೊಳ್ಳಬೇಕೆಂದರು.
ಸದಸ್ಯರಿಗೆ ಹೆಚ್ಚಿನ ಸವಲತ್ತು ನೀಡುವ ದೃಷ್ಟಿಯಿಂದ ಅಬ್ಬೂರುಕಟ್ಟೆ ಗ್ರಾಮದ ಶಾಖೆಯಲ್ಲಿ ಶಿಥಿಲಗೊಂಡಿರುವ ಸಂಘದ ಗೋದಾಮಿನ ಬದಲಾಗಿ ನಬಾರ್ಡ್ ಸಂಸ್ಥೆಯಿಂದ ರೂ. 1ಕೋಟಿ ಸಾಲವನ್ನು ಪಡೆದು 500 ಮೆಟ್ರಿಕ್ ಸಾಮಥ್ರ್ಯದ ಗೋದಾಮು ನಿರ್ಮಿಸಲಾಗುತ್ತಿದೆ. ಸಂಘ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಜಿ.ಬಿ. ಸೋಮಯ್ಯ, ರೂಪಾ ಸತೀಶ್, ಬಿ.ಎಂ. ಸುರೇಶ್, ಬಿ.ಡಿ. ಮಂಜುನಾಥ್, ಕೆ.ಕೆ. ಚಂದ್ರಿಕ, ಪಿ.ಡಿ. ಮೋಹನ್‍ದಾಸ್. ಎಚ್.ಕೆ. ಚಂದ್ರಶೇಖರ್, ಪಿ.ಎ. ಅನಿತಾ, ಬಿ. ಶಿವಪ್ಪ, ಎಂ.ವಿ.ದೇವರಾಜ್, ಬಿ.ಪಿ. ಬಿಪಿನ್ ಹಾಗೂ ಮುಖ್ಯ ಕಾರ್ಯಹಣಾಧಿಕಾರಿ ಎಚ್.ಪಿ. ರವೀಂದ್ರ ಉಪಸ್ಥಿತರಿದ್ದರು.

error: Content is protected !!