ವಿರಾಜಪೇಟೆ ಲಯನ್ಸ್ ಕ್ಲಬ್‍ನಿಂದ ಕಾವೇರಿ ಮಾತೆಯ ಪ್ರತಿಮೆ ಅನಾವರಣ

December 14, 2020

ವಿರಾಜಪೇಟೆ:ಡಿ:14: ಲಯನ್ಸ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶ್ರೀ ಕಾವೇರಿ ಮಾತೆಯ ಪ್ರತಿಮೆಯನ್ನು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಟೆ ಮಾಡಲಾಯಿತು.

ವಿರಾಜಪೇಟೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಲ.ಡಾ|| ಗೀತಾ ಪ್ರಕಾಶ್ ಮತ್ತು ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮ ಸಂಯೋಜಕಿ ಬಿ.ಎಂ. ಭಾರತಿ ಅವರು ಜಂಟಿಯಾಗಿ ಅನಾವರಣ ಮಾಡಿದರು.
ಬಳಿಕ ಮಾತನಾಡಿದ ಡಾ|| ಗೀತಾ ಪ್ರಕಾಶ್ ಅವರು ಲಯನ್ಸ್ ಸಂಸ್ಥೆಯು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಕಾರ್ಯಕ್ರಮಗಳ ಭಾಗವಾಗಿ ವಿರಾಜಪೇಟೆ ಶಾಖೆಯ ಆಡಳಿತ ಮಂಡಳಿಯ ಪರಿಶ್ರಮದಿಂದ ಹಾಗೂ ಕೊಡುಗೈದಾನಿಗಳ ಸಹಾಯದಿಂದ ಜಲದರ್ಶೀನಿ ಕಾವೇರಿ ಮಾತೆಯ ಕಲ್ಲಿನಿಂದ ನಿರ್ಮಿಸಲಾದ ಪ್ರತಿಮೆಯನ್ನು ಪ್ರತಿಷ್ಠೆ ಮಾಡಲಾಗಿದೆ. ಕಾವೇರಿ ಮಾತೆಯು ಎಲ್ಲಾ ಜನತೆಗೂ ಸುಖ ಶಾಂತಿ ಕರುಣಿಸಲಿ ಎಂದು ಶುಭ ಹಾರೈಸಿದರು.

ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತøಚಿಕೀತ್ಸಕ ಡಾ|| ವಿಶ್ವನಾಥ್ ಸಿಂಪಿ. ಮಾತನಾಡಿ, ಆಸ್ಪತ್ರೆಯ ಕೊರಿಕೆಯ ಮೇರೆಗೆ ಲಯನ್ಸ್ ಸಂಸ್ಥೆಯು ಹಲವು ದಿನಗಳ ನೀರಿಕ್ಷೆಯು ಇಂದು ಈಡೆರಿದೆ. ಶ್ರೀ ಕಾವೇರಿ ಮಾತೆಯ ಪ್ರತಿಮೆಯನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದು ಹರ್ಷದಾಯಕವಾಗಿದೆ ಎಂದರು.
ಆಸ್ಪತ್ರೆಗೆ ಭೇಟಿ ನೀಡಿದ ಸರ್ವತಾ ರೋಗಿಗಳನ್ನು ಶ್ರೀಮಾತೆಯು ಹರಸಲಿ. ಶೀರ್ಘವಾಗಿ ಗುಣಮುಖವಾಗಿ ಮನೆಗೆ ಹಿಂದಿರುಗುವಂತೆ ಆರ್ಶಿವದಿಸಲಿ ಎಂದು ಶುಭ ಹಾರೈಸಿ ಲಯನ್ಸ್ ಕ್ಲಬ್ ನ ಆಡಳಿತ ಮಂಡಳಿಗೂ ಮತ್ತು ಸದಸ್ಯರಿಗೂ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದ ಧನ್ಯವಾದ ಸಮರ್ಪಿಸಿದರು.

ವಿರಾಜಪೇಟೆ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲ. ಎ.ಪಿ.ಪ್ರಸನ್ನಾ ಸಂಸ್ಥೆಯ ಕಾರ್ಯದರ್ಶಿ ಲ.ಬಿ.ಎಸ್ ಪುಷ್ಪರಾಜ್, ಕೋಶಾಧಿಕಾರಿ ಅಮ್ಮಣಿಚಂಡ ಪ್ರವೀಣ್ ಕುಮಾರ್, ಲಯನ್ ಜಿಲ್ಲಾ ಪ್ರಥಮ ಮಹಿಳೆ ಡಾ. ಗಾಯತ್ರಿ ಮತ್ತು ವಿರಾಜಪೇಟೆ ಲಯನ್ಸ್ ಕ್ಲಬ್‍ನ ಸದಸ್ಯರು ಹಾಜರಿದ್ದರು.

error: Content is protected !!