ಚೇರಳ ಗೌಡ ಸಂಘದ ಮಹಾಸಭೆ : ರೈತಮಿತ್ರ ಕೂಟದ ಪ್ರತಿನಿಧಿಗಳಿಗೆ ಸನ್ಮಾನ

December 14, 2020

ಮಡಿಕೇರಿ ಡಿ.14 : ಚೇರಳ ಗೌಡ ಸಂಘದ ವಾರ್ಷಿಕ ಮಹಾಸಭೆ ಮರದಾಳು ಐನ್‍ಮನೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರು ಗೌಡ ಜನಾಂಗದ ಅಭ್ಯುದಯದ ಕುರಿತು ಸಲಹೆಗಳನ್ನು ನೀಡಿದರು. ಸಂಘದ ಸದಸ್ಯರು ತಾವು ಬೆಳೆದ ಏಲಕ್ಕಿ ಹಾಗೂ ಕರಿಮೆಣಸನ್ನು ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ದಾಸ್ತಾನು ಇಡಲಿದ್ದಾರೆ ಎಂದು ಭರವಸೆ ನೀಡಿದರು.
ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ರೈತಮಿತ್ರಕೂಟದ ಅಧ್ಯಕ್ಷ ಸೂದನ ಈರಪ್ಪ ಮಾತನಾಡಿ ಮುಂದಿನ ಐದು ವರ್ಷಗಳಲ್ಲಿ ಯಾವುದೇ ಲೋಪದೋಷ ಆಗದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿದರು. ಸಂಘವನ್ನು ಲಾಭದತ್ತ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಚೇರಳ ಗೌಡ ಸಂಘದ ವತಿಯಿಂದ ಸಹಕಾರ ಸಂಘದ ಅಧ್ಯಕ್ಷ ಸೂದನ ಈರಪ್ಪ, ಉಪಾಧ್ಯಕ್ಷ ಕೆ.ಕೆ.ಗೋಪಾಲ, ನಿರ್ದೇಶಕರುಗಳಾದ ಪೇರಿಯನ ಉದಯ, ಕುಂಭಗೌಡನ ವಿನೋದ್ ಕುಮಾರ್, ಬಿ.ಸಿ.ಚೆನ್ನಪ್ಪ, ಸಿ.ಪಿ.ವಿಜಯಕುಮಾರ್, ಅಂಬೆಕಲ್ಲು ಸುಶೀಲಕುಶಾಲಪ್ಪ ಹಾಗೂ ಪರಿವಾರನ ಕವಿತಾಭರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕ ವರದಿಯನ್ನು ಧನಂಜಯ ಮಂಡಿಸಿದರು. ಕೋಶಾಧಿಕಾರಿ ಮುಕ್ಕಾಟಿರ ಪಳಂಗಪ್ಪ ಸ್ವಾಗತಿಸಿ, ಪೇರಿಯನ ಪೂಣಚ್ಚ ವಂದಿಸಿದರು. ಪೇರಿಯನ ರಕ್ಷಿತಾ ಸಹೋದರಿಯರು ಪ್ರಾರ್ಥಿಸಿದರು.

error: Content is protected !!