ಟೀಮ್ ಹೆಚ್.ಟಿ.ಜೆಡ್ ಸಂಸ್ಥೆಯಿಂದ “ಹೆಲ್ಮೆಟ್ ಬಳಸಿ ಜೀವ ಉಳಿಸಿ” ಜಾಗೃತಿ ಜಾಥ

December 14, 2020

ವಿರಾಜಪೇಟೆ:ಡಿ:14: ದಕ್ಷಿಣ ಭಾರತ ಟೀಮ್ ಹೆಚ್.ಟಿ,ಜೆಡ್ ಸಂಸ್ಥೆಯ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ 2.ಸ್ಟ್ರೋಕ್ ದ್ವಿಚಕ್ರ ವಾಹನ ಸವಾರರಿಂದ ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು.
ಟೀಮ್ ಹೆಚ್.ಟಿ.ಜೆಡ್ ದಕ್ಷಿಣಾ ಭಾರತದ ಕರ್ನಾಟಕ ವಲಯ ಸಂಸ್ಥೆಯಿಂದ ನಗರದ ತಾಲ್ಲೂಕು ಮೈದಾನದಲ್ಲಿ 2.ಸ್ಟ್ರೋಕ್ ದ್ವಿಚಕ್ರ ವಾಹನ ಸವಾರರ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ದ್ವಿಚಕ್ರ ವಾಹನ ಸವಾರಗಾರರು ಹೆಲ್ಮೆಟ್ ಬಳಸಿ ಜೀವ ಉಳಿಸಿ ಜಾಗೃತಿ ಜಾಥ ನಡೆಸಿದರು.
ಜಾಥಕ್ಕೆ ವಿರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ಅವರು ಶ್ವೆತ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವೃತ್ತ ನೀರಿಕ್ಷಕರು ಇಲಾಖೆಯ ವತಿಯಿಂದ ಡಿಸೆಂಬರ್ ತಿಂಗಳು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದ್ದು. ಇಲಾಖೆಯೋಂದಿಗೆ ಹೆಚ್.ಟಿ.ಜೆಡ್ ಸಂಸ್ಥೆ ಕೈಜೋಡಿಸಿ ಜಂಟಿಯಾಗಿ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದರು.
ದ್ವಿಚಕ್ರ ವಾಹನ ಸವಾರರು ತಮ್ಮ ಜೀವಕ್ಕೆ ಬೆಲೆ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ಹೊರಡಿಸಲಾದ ಕಾನೂನು ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ತಾಲ್ಲೂಕು ಮೈದಾನದಲ್ಲಿ ನಡೆದ ಸರಳ ಸಮಾರಂಭಕ್ಕೆ 2.ಸ್ಟ್ರೋಕ್ ಕೂರ್ಗ್ ಒಪನ್ ಕ್ಲಾಸ್ ನಲ್ಲಿ 2013,14 ಮತ್ತು15 ರಲ್ಲಿ ನಡೆದ ರ್ಯಾಲಿಯಲ್ಲಿ ಚಾಂಪಿಯನಾಗಿ ಹೊರಹೊಮ್ಮಿದ ಮುಂಡಾಚಾಡೀರ ಸೂರಜ್ ಮಂದಣ್ಣ ಮತ್ತು ರೈಡ್ ದೇ ಹಿಮಾಲಯ ಎರಡು ಭಾರಿ ಚಾಂಪಿಯನ್ ಪಟ್ಟ ಪಡೆದ ಮಾಳೇಟಿರ ಚೇತನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಈ ಸಂದರ್ಭ ಇರ್ವರು ಆಟೋ ಸ್ಪೋಟ್ರ್ಸ್‍ನ ದಿಗ್ಗಜರನ್ನು ಆಯೋಜಕರು ಸನ್ಮಾನಿಸಿ ಗೌರವಿಸಿದರು.
ಜಾಗೃತಿ ಜಾಥದಲ್ಲಿ ಕೇರಳ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ನಾನಾ ಸ್ಥಳಗಳಿಂದ 100 ಕ್ಕೂ ಅಧಿಕ ದ್ವಿಚಕ್ರ ವಾಹನ ಸವಾರರು ಭಾಗವಹಿಸಿದ್ದರು.
ಜಾಥದಲ್ಲಿ ಕೊಡಗಿನ ಮಹಿಳಾ ದ್ವಿಚಕ್ರ ಸವಾರರಾದ ಪೊನ್ನಂಪೇಟೆಯ ಆಶೀನ್ ಬೊಳ್ಳಮ್ಮ ಮತ್ತು ಕುಶಾಲನಗರದ ಆಶ್ವಿನಿ ಅವರು ಭಾಗವಹಿಸಿರುವುದು ವಿಶೇಷವಾಗಿತ್ತು.
ನಿದಾನ ಗತಿಯ ವೇಗ ಸ್ಪರ್ಧೆಯಲ್ಲಿ ಕೊಡಗಿನ ರೀಶಭ್ ಮತ್ತು ತಮಿಳುನಾಡಿನ ವೆಲ್ಲೂರಿನ ಸಯೈದ್ ಜುನೈದ್ ಪ್ರಥಮ ಸ್ಥಾನ ಪಡೆದುಕೊಂಡರು. ಬಳಿಕ ದ್ವಿಚಕ್ರ ವಾಹನ ಸವಾರರಿಂದ ಸಾಹಸ ಪ್ರದರ್ಶನ ನಡೆದವು.
ಹೆಚ್.ಟಿ.ಜೆಡ್ ಸಂಸ್ಥೆಯ ಕರ್ನಾಟಕ ವಲಯ ಆಯೋಜಕರಾದ ಆನ್ಸನ್,ನಾವಜ್, ಫಹಾದ್, ಸುಮನ್ ಮತ್ತು ಅಜೀತ್ ಸಿದ್ದಾಪುರ ಹಾಗೂ ಇತರ ರಾಜ್ಯಗಳಿಂದ ಆಗಮಿಸಿದ ಹೆಚ್.ಟಿ.ಜೆಡ್ ಸಂಸ್ಥೆಯ ಸದಸ್ಯರು ಹಾಜರಿದ್ದರು.

error: Content is protected !!