ಡಿ.25 ರಿಂದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ

December 14, 2020

ಮಡಿಕೇರಿ ಡಿ.14 : ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಪ್ರತಿಷ್ಠಿತ ಬ್ಯಾಂಕುಗಳು ಗುಮಾಸ್ತ ಹಾಗೂ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅವುಗಳ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಒಂದು. ಕೊಡಗು ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರು ಇಂತಹ ಬ್ಯಾಂಕುಗಳಲ್ಲಿ ಉದ್ಯೋಗವನ್ನು ಪಡೆದು ಅವರ ಸೇವೆಯು ಜಿಲ್ಲೆಯ ಜನತೆಗೆ ಲಭಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಈ ಹಿಂದೆ ಹಲವು ಬಾರಿ ಜಿಲ್ಲೆಯ ಯುವ ಪೀಳಿಗೆಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉಚಿತವಾಗಿ ಆಯೋಜಿಸಿದ್ದು, ಅದರಂತೆ ಈ ಬಾರಿಯೂ ಅಂತಹ ಉಚಿತ ತರಬೇತಿಯು ಡಿಸೆಂಬರ್, 25 ರಿಂದ ಡಿಸೆಂಬರ್, 28 ರವರೆಗೆ ನಗರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬ್ಯಾಂಕಿಂಗ್ ಪರೀಕ್ಷಾ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಆರ್.ಕೆ.ಬಾಲಚಂದ್ರ ಅವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಪ್ರಾಯೋಜಕರಾದ ನಬಾರ್ಡ್ ಸಹಾಯಕ ಮಹಾ ಪ್ರಬಂಧಕರು(ನಿವೃತ್ತ) ಮುಂಡಂಡ ಸಿ.ನಾಣಯ್ಯ ಅವರು ಕೋರಿದ್ದಾರೆ.
ಕಾರ್ಯಗಾರದಲ್ಲಿ 40 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುವುದು. ಆದ್ದರಿಂದ ಅಪೇಕ್ಷಿತರು ತಮ್ಮ ಹೆಸರು ನೋಂದಾಯಿಸಲು ದೂ.ಸಂ.9341421666, 9008180641, 9449148705, 8660360594 ನ್ನು ಸಂಪರ್ಕಿಸಬಹುದು.

error: Content is protected !!