ಡಿ.15 ರಿಂದ ಸತ್ಯಾಪನೆ ಮುದ್ರೆ ಶಿಬಿರ

December 14, 2020

ಮಡಿಕೇರಿ ಡಿ. 14 : ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಡಿಸೆಂಬರ್, 15 ರಿಂದ 25 ರವರೆಗೆ ಶನಿವಾರಸಂತೆಯ ಮಹಿಳಾ ಸಮಾಜದಲ್ಲಿ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ನಡೆಯಲಿದೆ. ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸುವಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರು ತಿಳಿಸಿದ್ದಾರೆ.

error: Content is protected !!